Sunday, June 26, 2022

Latest Posts

ಈ ದೋಸೆ ತಿನ್ನೋಕೆ ಪಲ್ಯ, ಚಟ್ನಿ, ಸಾಂಬಾರ್ ಯಾವುದೂ ಬೇಡ.. ಯಾವ ದೋಸೆ.. ಅದರ ರೆಸಿಪಿ ಇಲ್ಲಿದೆ..

ಯಾವ ರೀತಿ ದೇಸೆ ಮಾಡಿದರೂ ಅದಕ್ಕೆ ಚಟ್ನಿ, ಪಲ್ಯ ಅಥವಾ ಸಾರು ಇರಲೇಬೇಕು. ಆದರೆ ನಾವು ಈಗ ನಿಮಗೆ ಹೇಳಿಕೊಡುವ ದೋಸೆಗೆ ಯಾವ ಚಟ್ನಿಯೂ ಬೇಡ. ತುಪ್ಪ ಹಾಕಿಕೊಂಡು ಹಾಗೇ ತಿನ್ನಬಹುದು. ಮತ್ತೆ ಇದು ಹೆಲ್ತಿಯಾದ ದೋಸೆಯೂ ಹೌದು. ಮಕ್ಕಳ ಬಾಕ್ಸ್‌ಗೂ ಹಾಕಿ ಕೊಡಬಹುದು. ಮಸಾಲಾ ಗೋಧಿ ದೋಸೆ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ..
ಬೇಕಾಗಿರುವ ಸಾಮಾಗ್ರಿಗಳು

  • ಗೋಧಿಹಿಟ್ಟು
  • ಅಕ್ಕಿಹಿಟ್ಟು
  • ಓಂಕಾಳು
  • ಖಾರದಪುಡಿ
  • ಸಾಂಬಾರ್ ಪುಡಿ
  • ಉಪ್ಪು
  • ಗರಂ ಮಸಾಲಾ
    ಮಾಡುವ ವಿಧಾನ
  • ಮೊದಲು ಗೋಧಿಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಹಾಗೆ ಮೇಲೆ ನಮೂದಿಸಿದ ಎಲ್ಲ ಪುಡಿಗಳನ್ನು ಹಾಕಿ ಮಿಕ್ಸ್ ಮಾಡಿ.
  • ಇದಕ್ಕೆ ನೀರು ಹಾಕಿ ದೋಸೆ ಹದಕ್ಕೆ ತನ್ನಿ.
  • ಚಿಕ್ಕ ದೋಸೆಯೊಂದನ್ನು ಹಾಕಿ ಉಪ್ಪು ಖಾರ ಪರೀಕ್ಷಿಸಿ
  • ನಂತರ ಸ್ಲಲ್ಪ ಸಮಯ ಬಿಟ್ಟುಬಿಡಿ
  • ಇದಾದ ನಂತರ ದೋಸೆ ಹಾಕಿಕೊಂಡು, ಕ್ರಿಸ್ಪಿಯಾದ ದೋಸೆಗೆ ತುಪ್ಪ ಹಾಕಿಕೊಂಡು ತಿನ್ನಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss