Wednesday, November 25, 2020

Latest Posts

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಂಗಳೂರಿಗೆ ಭೇಟಿ

ಹೊಸ ದಿಗಂತ ವರದಿ, ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮಂಗಳವಾರ ಮಂಗಳೂರಿಗೆ ಆಗಮಿಸಿದ್ದು, ದ.ಕ. ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್,...

ನಾಲ್ಕೂವರೆ ತಿಂಗಳಲ್ಲಿ ಬರೋಬ್ಬರಿ 22 ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡ ದಾದಾ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕಳೆದ ನಾಲ್ಕೂವರೆ ತಿಂಗಳಲ್ಲಿ ಸುಮಾರು 22 ಬಾರಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿರುವುದಾಗಿ ಮಾಜಿ ಕ್ರಿಕೆಟಿಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಕಳೆದ ನಾಲ್ಕೂವರೆ ತಿಂಗಳಲ್ಲಿ...

ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ: ನ.26-28ರವರೆಗೆ ಅಷ್ಟಮಂಗಲ ಪ್ರಶ್ನಾಚಿಂತನೆ, ಜೀರ್ಣೋದ್ಧಾರ, ಸಂಕಲ್ಪಸಭೆ

ಹೊಸ ದಿಗಂತ ವರದಿ, ಉಡುಪಿ: ಕಾರ್ಕಳ ತಾಲೂಕು ಹಿಂದು ಜಾಗರಣ ವೆೇದಿಕೆ, ಅತ್ತೂರು ಕೃಷ್ಣ ಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ನಿಮಿತ್ತ ಅಷ್ಟಮಂಗಲ ಪ್ರಶ್ನಾಚಿಂತನೆ ಮತ್ತು ಜೀರ್ಣೋದ್ಧಾರ...

ಈ ಪುಟ್ಟ ಗ್ರಾಮದ 250 ಮನೆಗಳಲ್ಲೂ ರಾರಾಜಿಸುತ್ತಿವೆ ಪುತ್ರಿಯರ ‘ನೇಮ್‌ಪ್ಲೇಟ್’!

ಗುರ್ಗಾಂವ್: ಹೊಸ ಮನೆಗಳಿಗೆ ದೇವರ ಹೆಸರಿಡುವುದು ಅಥವಾ ಮನೆಯ ಯಜಮಾನ ಅಥವಾ ಯಜಮಾನಿಯ ಅಥವಾ ಹಿರಿಯರ ಹೆಸರಿಡುವುದು ಸರ್ವೇಸಾಮಾನ್ಯ. ದೇವರ-ಹಿರಿಯರ ಹೆಸರಲ್ಲಿ ಆಸಕ್ತಿ ಇಲ್ಲದ ಕೆಲವರು ಮನೆಗೆ ಆನಂದ ನಿಲಯ, ವಸಂತ ವಿಹಾರ ಇನ್ನೇನೇನೋ ಹೆಸರಿಡುವುದಿದೆ. ಇನ್ನು ಕೆಲವರು ನಮ್ಮ ಮನೆಯ ಹೆಸರು ನೆರೆಹೊರೆಯವರ ಮನೆಯ ಹೆಸರಿಗಿಂತ ಚೆಂದ ಇರಬೇಕೆಂದು ಪೈಪೋಟಿಗಿಳಿದು ,ಅರ್ಥವಾಗದ ತೆರ ಅಕ್ಷರ ಜೋಡಣೆ ಮಾಡಿ ವಿಕೃತಿ ಮೆರೆಯುವುದೂ ಇದೆ.
ಆದರೆ ದೂರದ ಹರ್ಯಾಣದ ನುಹ್ ಜಿಲ್ಲೆಯ ಪುಟ್ಟ ಗ್ರಾಮವಾಸಿಗಳು ಮನೆಫಲಕ ವಿಚಾರದಲ್ಲಿ ಹೊಸತನ ಮೆರೆದಿದ್ದಾರೆ. ನುಹ್ (ಹಿಂದಿನ ಮೇವಾಡ)ಜಿಲ್ಲೆಯ ಕಿರೋರಿ ಗ್ರಾಮದಲ್ಲಿ ಸುಮಾರು ೨೫೦ ಮನೆಗಳಿವೆ. ಸುಮಾರು ೧೨೦೦ ನಿವಾಸಿಗಳಿದ್ದಾರೆ. ಈ ಪ್ರತೀ ಮನೆಗಳ ಗೇಟಿಗೆ ಅಥವಾ ಮನೆಯ ಗೋಡೆಗೆ ಶುಕ್ರವಾರ ಹೊಸ ಫಲಕಗಳನ್ನಿಡಲಾಗಿದೆ. ವಿಶೇಷವೆಂದರೆ , ಈ ಫಲಕಗಳಲ್ಲಿ ಕುಟುಂಬದ ಹೆಣ್ಣುಮಕ್ಕಳ ಹೆಸರನ್ನು ಮಾತ್ರ ಮುದ್ರಿಸಲಾಗಿದೆ. ಅಂದರೆ, ಈ ಮನೆಯಲ್ಲಿ ಹೆಣ್ಣುಮಕ್ಕಳಿಗೇ ಪ್ರಾಧಾನ್ಯತೆ ಎಂದು ಪರೋಕ್ಷ ಬಿಂಬಿಸಲಾಗಿದೆ. ನೆರೆಹೊರೆಯವರಾಗಲಿ, ಬಂಧುಗಳಾಗಿರಲಿ ತಮಗೆ ಸಂಬಂಧಪಟ್ಟ ಕುಟುಂಬದ ನಿರ್ದಿಷ್ಟ ಹೆಣ್ಣುಮಕ್ಕಳ ಹೆಸರು ಹೇಳಿದರೆ ಮಾತ್ರ ಅವರ ಮನೆ ಎಲ್ಲಿದೆ, ಯಾವುದೆಂದು ಪರಿಸರ ನಿವಾಸಿಗಳು ತಿಳಿಸುವರು. ಮನೆಯ ಯಜಮಾನ-ಒಡತಿ ಹೆಸರು ಹೇಳಿದರೆ ಯಾರಿಗೂ ಗೊತ್ತಾಗದು.ಈ ತೆರ ಪರಿವರ್ತನೆಯ ಗಾಳಿ ಬೀಸಿದೆ ಈ ಗ್ರಾಮದಲ್ಲಿ!
ಗ್ರಾಮದ ಹೆತ್ತವರೆಲ್ಲರೂ ಸಮ್ಮತಿಸಿ ಅನುಷ್ಟಾನಿಸಿರುವ ಈ ಹೊಸತನ-ಹೊಸ ಕ್ರಮ, ಮನೆಯ ಹೆಣ್ಮಕ್ಕಳ ಪಾಲಿಗೆ ನಿಜಕ್ಕೂ ಖುಷಿ ಮತ್ತು ಹೆಮ್ಮೆಯ ಸಂಗತಿ. ಲಿಂಗ ಸಮಾನತೆಯ ಬಗ್ಗೆ ಪ್ರಜ್ಞೆ ಮೂಡಿಸುವಲ್ಲಿ ಈ ಉಪಕ್ರಮ ಪೂರಕ ಮತ್ತು ಗ್ರಾಮದ ಹುಡುಗಿಯರಿಗೆ ಮಾನ್ಯತೆ ಕೊಡುವಂತಹ ಕ್ರಮವೂ ಇದಾಗಿದೆ.
ಜಿಂದ್ ಜಿಲ್ಲೆಯ ಬೀಬಿಪುರ ಗ್ರಾಮದ ಮಾಜಿ ಸರಪಂಚ ಸುನಿಲ್ ಜಗ್ಲಾನ್ ನೇತೃತ್ವದ ‘ಲಾದೋ ಸ್ವಾಭಿಮಾನ್ ’ ಸಂಸ್ಥೆಯು ಈ ‘ಹೊಸತನ’ವನ್ನು ಇಡೀ ಗ್ರಾಮಕ್ಕೆ ಪರಿಚಯಿಸಿದೆ. ಸುನಿಲ್ ಶುಕ್ರವಾರ ಮೊದಲಾಗಿ ತಮ್ಮ ಮನೆಯಲ್ಲೇ ಈ ತೆರ ಪರಿವರ್ತನೆಗೆ ನಾಂದಿ ಹಾಡಿದ್ದು, ಫಲಕದ ಬಳಿ ನಿಂತು ಮಗಳೊಂದಿಗೆ ಸೆಲೀ ಕ್ಲಿಕ್ಕಿಸಿದ್ದಾರೆ. ಪ್ರಧಾನಿ ಮೋದಿಯವರು ಸುನಿಲ್ ಅವರ ಈ ಕೈಂಕರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಗ್ರಾಮದ ಎಲ್ಲಾ ಕುಟುಂಬಗಳೂ ಏಕಕಾಲಕ್ಕೆ ತಮ್ಮ ತಮ್ಮ ಮನೆ ಗೋಡೆಗೆ-ಗೇಟಿಗೆ ಪುತ್ರಿಯರ ಹೆಸರಿನ ಫಲಕವನ್ನು ಅಂಟಿಸಿದರು.
ಅಂದ ಹಾಗೆ, ಗ್ರಾಮೀಣರಿಗೆ ಅವರ ಆಸ್ತಿಪಾಸ್ತಿಗಳ ಸಂಪೂರ್ಣ ಹಕ್ಕುಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅನುಷ್ಟಾನಿಸಿರುವ ‘ಸ್ವಾಮಿತ್ವ’ ಯೋಜನೆಯು ತನ್ನ ಪ್ರಸ್ತುತ ಪ್ರಯತ್ನಕ್ಕೆ ಸೂರ್ತಿ ಎಂದು ಸುನಿಲ್ ಹೇಳುತ್ತಾರೆ.
ಹರ್ಯಾಣ ರಾಜ್ಯದಲ್ಲೇ ಪ್ರಥಮ ಪ್ರಯತ್ನವಿದು
ಗ್ರಾಮದ ಎಲ್ಲಾ ಮನೆಗಳಲ್ಲೂ ಪುತ್ರಿಯರ ಹೆಸರಿನಲ್ಲಿ ಫಲಕ ಅಥವಾ ನೇಮ್‌ಪ್ಲೇಟ್ ರಾರಾಜಿಸತೊಡಗಿರುವುದು ಹರ್ಯಾಣ ರಾಜ್ಯದಲ್ಲಿ ಇದೇ ಮೊದಲು. ದೇಶದ ಕೆಲವೆಡೆ ಮನೆಗಳಿಗೆ ಪುತ್ರಿಯರ ಹೆಸರಿಡುವ ಪದ್ಧತಿ ಈ ಹಿಂದೆಯೂ ಇತ್ತಾದರೂ, ಇಷ್ಟೊಂದು ಪೂರ್ಣ ಪ್ರಮಾಣದಲ್ಲಿ ಅಥವಾ ಏಕಕಾಲಕ್ಕೆ ಹಳ್ಳಿಗೆ ಹಳ್ಳಿಯೇ ಪುತ್ರಿಯರಿಗೆ ಈ ತೆರ ಮನ್ನಣೆ ಕೊಟ್ಟದ್ದು ಇದೇ ಫಸ್ಟ್ ಎಂದು ಸುನಿಲ್ ಸಂತಸ ವ್ಯಕ್ತಪಡಿಸುತ್ತಾರೆ.
ಅಷ್ಟೊಂದು ಸಂಪನ್ನವಲ್ಲದ ನುಹ್ ಜಿಲ್ಲೆಯ ಲಿಂಗ ನಿಷ್ಪತ್ತಿ ೯೦೮. ಹರ್ಯಾಣದ ಇತರ ಜಿಲ್ಲೆಗಳೊಂದಿಗೆ ಹೋಲಿಸಿದರೆ ಈ ಪ್ರಮಾಣ ಜಾಸ್ತಿ. ನುಹ್ ಜಿಲ್ಲೆಯಲ್ಲಿರುವಷ್ಟು ಸಂಖ್ಯೆಯ ಹೆಣ್ಮಕ್ಕಳು ಇತರ ಜಿಲ್ಲೆಗಳಲ್ಲೂ ಇಲ್ಲ ಎಂಬುದು ಕೂಡ ಗಮನಾರ್ಹ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಂಗಳೂರಿಗೆ ಭೇಟಿ

ಹೊಸ ದಿಗಂತ ವರದಿ, ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮಂಗಳವಾರ ಮಂಗಳೂರಿಗೆ ಆಗಮಿಸಿದ್ದು, ದ.ಕ. ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್,...

ನಾಲ್ಕೂವರೆ ತಿಂಗಳಲ್ಲಿ ಬರೋಬ್ಬರಿ 22 ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡ ದಾದಾ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕಳೆದ ನಾಲ್ಕೂವರೆ ತಿಂಗಳಲ್ಲಿ ಸುಮಾರು 22 ಬಾರಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿರುವುದಾಗಿ ಮಾಜಿ ಕ್ರಿಕೆಟಿಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಕಳೆದ ನಾಲ್ಕೂವರೆ ತಿಂಗಳಲ್ಲಿ...

ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ: ನ.26-28ರವರೆಗೆ ಅಷ್ಟಮಂಗಲ ಪ್ರಶ್ನಾಚಿಂತನೆ, ಜೀರ್ಣೋದ್ಧಾರ, ಸಂಕಲ್ಪಸಭೆ

ಹೊಸ ದಿಗಂತ ವರದಿ, ಉಡುಪಿ: ಕಾರ್ಕಳ ತಾಲೂಕು ಹಿಂದು ಜಾಗರಣ ವೆೇದಿಕೆ, ಅತ್ತೂರು ಕೃಷ್ಣ ಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ನಿಮಿತ್ತ ಅಷ್ಟಮಂಗಲ ಪ್ರಶ್ನಾಚಿಂತನೆ ಮತ್ತು ಜೀರ್ಣೋದ್ಧಾರ...

ನ. 26ರಂದು ಬಿಡುಗಡೆಯಾಗಲಿದೆ ‘ಸೂಪರ್ ಅಗೋಳಿ ಮಂಜಣ್ಣ’ ಚಿತ್ರದ ಟೀಸರ್

ಹೊಸ ದಿಗಂತ ವರದಿ, ಉಡುಪಿ: ತುಳುನಾಡಿನ ವೀರ ಪುರುಷ ಅಗೋಳಿ ಮಂಜಣ್ಣನ ಕುರಿತ ತುಳು, ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ‘ಸೂಪರ್ ಅಗೋಳಿ ಮಂಜಣ್ಣ’ ತುಳು ಮ್ಯಾನ್ ಆ್ ತುಳುನಾಡ್ ಎಂಬ ಟ್ಯಾಗ್‌ಲೈನ್ ಹೊಂದಿರುವ...

Don't Miss

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಂಗಳೂರಿಗೆ ಭೇಟಿ

ಹೊಸ ದಿಗಂತ ವರದಿ, ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮಂಗಳವಾರ ಮಂಗಳೂರಿಗೆ ಆಗಮಿಸಿದ್ದು, ದ.ಕ. ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್,...

ನಾಲ್ಕೂವರೆ ತಿಂಗಳಲ್ಲಿ ಬರೋಬ್ಬರಿ 22 ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡ ದಾದಾ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕಳೆದ ನಾಲ್ಕೂವರೆ ತಿಂಗಳಲ್ಲಿ ಸುಮಾರು 22 ಬಾರಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿರುವುದಾಗಿ ಮಾಜಿ ಕ್ರಿಕೆಟಿಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಕಳೆದ ನಾಲ್ಕೂವರೆ ತಿಂಗಳಲ್ಲಿ...

ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ: ನ.26-28ರವರೆಗೆ ಅಷ್ಟಮಂಗಲ ಪ್ರಶ್ನಾಚಿಂತನೆ, ಜೀರ್ಣೋದ್ಧಾರ, ಸಂಕಲ್ಪಸಭೆ

ಹೊಸ ದಿಗಂತ ವರದಿ, ಉಡುಪಿ: ಕಾರ್ಕಳ ತಾಲೂಕು ಹಿಂದು ಜಾಗರಣ ವೆೇದಿಕೆ, ಅತ್ತೂರು ಕೃಷ್ಣ ಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ನಿಮಿತ್ತ ಅಷ್ಟಮಂಗಲ ಪ್ರಶ್ನಾಚಿಂತನೆ ಮತ್ತು ಜೀರ್ಣೋದ್ಧಾರ...
error: Content is protected !!