ಹೊಸದಿಗಂತ ಆನ್ ಲೈನ್ ಡೆಸ್ಕ್:
ಫೆ. 18ರಂದು ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಿಡ್ಡಿಂಗ್ನಲ್ಲಿ ಭಾಗಿಯಾಗಲು 1097 ಪ್ಲೇಯರ್ಸ್ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಹೆಸರು ನೋಂದಣಿ ಮಾಡಿಕೊಂಡವರ ಪೈಕಿ 207 ಭಾರತೀಯ ಪ್ಲೇಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದು, 21 ಪ್ಲೇಯರ್ಸ್ ಅನ್ಕ್ಯಾಪ್ಡ್ ಆಗಿದ್ದಾರೆ. ವೆಸ್ಟ್ ಇಂಡೀಸ್ನ 56, ಆಸ್ಟ್ರೇಲಿಯಾದ 42 ಹಾಗೂ ದಕ್ಷಿಣ ಆಫ್ರಿಕಾದ 38 ಪ್ಲೇಯರ್ಸ್ ತಮ್ಮ ಹೆಸರು ದಾಖಲು ಮಾಡಿದ್ದಾರೆ.
ಪ್ರತಿ ತಂಡ 25 ಪ್ಲೇಯರ್ಸ್ ಹೊಂದಲು ಅವಕಾಶವಿದ್ದು, ಈ ಸಲದ ಹರಾಜು ಪ್ರಕ್ರಿಯೆಯಲ್ಲಿ 61 ಆಟಗಾರರ ಖರೀದಿ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ 22 ಪ್ಲೇಯರ್ಸ್ ವಿದೇಶಿಯರಾಗಿರುತ್ತಾರೆ.
ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಫ್ರಾಂಚೈಸಿಗಳ ಪೈಕಿ ಪಂಜಾಬ್ 53.20 ಕೋಟಿ, ಆರ್ಸಿಬಿ 35.90 ಕೋಟಿ, ರಾಜಸ್ಥಾನ 34.85 ಕೋಟಿ, ಚೆನ್ನೈ 22.90 ಕೋಟಿ, ಮುಂಬೈ ಇಂಡಿಯನ್ಸ್ 15.35 ಕೋಟಿ, ಡೆಲ್ಲಿ 12.9 ಕೋಟಿ ಹಾಗೂ ಕೆಕೆಆರ್ ಮತ್ತು ಹೈದರಾಬಾದ್ ಬಳಿ ಕ್ರಮವಾಗಿ 10.75 ಕೋಟಿ ರೂ. ಇದೆ.