ಹೊಸದಿಗಂತ ಆನ್ ಲೈನ್ ಡೆಸ್ಕ್:
ಹಬ್ಬದ ಸಂದರ್ಭ ಚಿನ್ನ ಖರೀದಿ ಮಾಡಲು ನಿರ್ಧರಿಸಿದವರಿಗೆ ಬಿಗ್ ಶಾಕ್ ಕಾದಿದೆ.
ಹಬ್ಬಕ್ಕೂ ಮುನ್ನವೇ ಚಿನ್ನದ ಬೆಲೆಯಲ್ಲಿ 791 ರೂ. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 51,717 ರೂ.ಗೆ ಏರಿಕೆಯಾಗಿದೆ.
ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು, ಕೆಜಿಗೆ 2,147 ರೂ. ಏರಿಕೆ ದಾಖಲಾಗಿದೆ. ಕೆಜಿ ಬೆಳ್ಳಿ ಬೆಲೆ 62,431 ರೂ.ಗಳಿಂದ 64,578 ರೂ.ಗೆ ಜಿಗಿತ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಔನ್ಸ್ ಗೆ 1,950 ಡಾಲರ್ ಗೆ ಏರಿಕೆಯಾದರೆ, ಬೆಳ್ಳಿ ಬೆಲೆ 25.44 ಡಾಲರ್ ಗೆ ಮಾರಾಟವಾಗಿದೆ.