ಹೊಸ ದಿಗಂತ ಆನ್ಲೈನ್ ಡೆಸ್ಕ್:
ಈ ಬಾರಿ ಜನವರಿ 26ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಅತ್ಯಾಧುನಿಕ ಯುದ್ಧ ವಿಮಾನ ‘ರಫೇಲ್’ ಭಾಗಿಯಾಗಲಿದೆ.
ಈ ಬಗ್ಗೆ ಭಾರತೀಯ ವಾಯುಸೇನೆ ಅಧಿಕೃತ ಮಾಹಿತಿ ನೀಡಿದೆ.
ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಸಂಭ್ರಮವನ್ನು ಮೊಟಕುಗೊಳಿಸಲಾಗಿದೆ. ಪೆರೇಡ್ಗೆ ಮುಖ್ಯ ಅತಿಥಿಗಳಾಗಿ ಈ ಬಾರಿ ಯಾವುದೇ ವಿದೇಶಿ ಗಣ್ಯರು ಉಪಸ್ಥಿತರಿರುವುದಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ.
ಈ ನಡುವೆಯೇ ಭಾರತೀಯ ವಾಯು ಸೇನೆ ‘ರಫೇಲ್’ ಅತಿಥಿಯಾಗಿ ಪಾಲ್ಗೊಳ್ಳುವ ಮಾಹಿತಿ ನೀಡಿದ್ದು, ಇದು ಪೆರೇಡ್ನ ರಂಗೇರಿಸಲಿದೆ.