Wednesday, August 17, 2022

Latest Posts

ಈ ಬಾರಿ ಗವಿಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸಿಲ್ಲ ಸೂರ್ಯರಶ್ಮಿ…

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಇಂದು ಗವಿಗಂಗಾಧರನಿಗೆ ಸೂರ್ಯ ರಶ್ಮಿ ಬಿದ್ದಿಲ್ಲ. ಇದರಿಂದ ಬೆಳಕಿನ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.
ಮಕರಸಂಕ್ರಾಂತಿಯಂದು ದೇಗುಲದ ಶಿವಲಿಂಗದ ಮೇಲೆ ಸೂರ್ಯರಶ್ಮಿಯ ಅಭಿಷೇಕವಾಗುತ್ತಿತ್ತು. ಆದರೆ ಈ ಬಾರಿ ಸೂರ್ಯನ ಕಿರಣ ಶಿವಲಿಂಗದ ಮೇಲೆ ಬೀಳಲೇ ಇಲ್ಲ.
ಸೂರ್ಯಪಥ ಬದಲಿಸಲಿದೆ.
ಈ ಬಾರಿ ಸಂಜೆ 5.27 ರ ವೇಳೆಗೆ ಸೂರ್ಯನಿಗೆ ಮೋಡ ಅಡ್ಡ ಬಂದ ಕಾರಣ ಸೂರ್ಯ ರಶ್ಮಿ ಗಂಗಾಧರೇಶ್ವರನವರೆಗೂ ತಲುಪಲಿಲ್ಲ. ನಂದಿಯವರೆಗೂ ಮಾತ್ರ ರಶ್ಮಿ ಬಂದಿದೆ. ಇದರಿಂದಾಗಿ ಅಪಾರ ಸಂಖ್ಯೆಯ ಭಕ್ತರಿಗೆ ನಿರಾಸೆಯಾಗಿದೆ. ಸೂರ್ಯನಿಗೆ ಮೋಡ ಅಡ್ಡಿ ಬಂದ ಕಾರಣ ಅಗೋಚರವಾಗಿ ಸೂರ್ಯ ರಶ್ಮಿಯ ಸ್ಪರ್ಶವಾಗಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!