Thursday, August 11, 2022

Latest Posts

ಈ ಬಾರಿ ದಾಖಲಾದ್ದು ಅಮೆರಿಕ ಕಳೆದ 120 ವರ್ಷಗಳಲ್ಲೇ ಕಂಡುಕೇಳರಿಯದ ಮತದಾನ ಪ್ರಮಾಣ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಳೆದ 120 ವರ್ಷಗಳಲ್ಲೇ ಅಮೆರಿಕ ಕಂಡುಕೇಳರಿಯದ ಮತದಾನ ಪ್ರಮಾಣ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲಾಗಿದೆ.
ಯುಎಸ್ ಎಲೆಕ್ಷನ್ ಪ್ರಾಜೆಕ್ಟ್ ಎಂಬ ನಿಷ್ಪಕ್ಷಪಾತ ಚುನಾವಣಾ ಸೈಟ್ನ ಮುಖ್ಯಸ್ಥ, ಫ್ಲೋರಿಡಾ ಯೂನಿರ್ವಸಿಟಿಯ ಪೊಲಿಟಿಕಲ್ ಸೈನ್ಸ್ ಅಸೋಸಿಯೇಟ್ ಪ್ರೊಫೆಸರ್ ಮೈಕಲ್ ಪಿ. ಮೆಕ್ಡೊನಾಲ್ಡ್ ಈ ಮಾಹಿತಿ ನೀಡಿದ್ದಾರೆ.

ಚುನಾವಣಾ ದತ್ತಾಂಶ ಸಂಗ್ರಹಿಸಿ ವಿಶ್ಲೇಷಿಸುತ್ತಿರುವ ಇವರು, ಈ ಬಾರಿ ಚುನಾವಣೆಗೆ 239 ದಶಲಕ್ಷ ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದುಕೊಂಡಿದ್ದರು. ಪ್ರಾಥಮಿಕ ಅಂದಾಜಿನ ಪ್ರಕಾರ ಈ ಪೈಕಿ 160  ದಶಲಕ್ಷ ಮತದಾರರು ಮತಚಲಾಯಿಸಿದ್ದಾರೆ. ನವೆಂಬರ್ 3 ರಂದು ನಡೆದ ಚುನಾವಣೆಯಲ್ಲಿ ಶೇಕಡ 66.9 ಮತದಾನವಾಗಿದೆ. ಇದು 1900 ನೇ ಇಸವಿಯಿಂದೀಚೆಗೆ ಗರಿಷ್ಠ ಪ್ರಮಾಣದ ಮತದಾನವಾಗಿದೆ. 1900 ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಗರಿಷ್ಠ ಶೇಕಡ 73.7 ಮತದಾನವಾಗಿತ್ತು ಎಂದು ಹೇಳಿದ್ದಾರೆ.

ದಾಖಲೆಗಳ ಪ್ರಕಾರ ಈ ವರ್ಷದ ಚುನಾವಣೆಯಲ್ಲಿ ಗರಿಷ್ಠ ಮತದಾನವಾಗಿದೆ. ಇದು 120 ವರ್ಷಗಳ ಅವಧಿಯಲ್ಲಿ ಗರಿಷ್ಠ ಪ್ರಮಾಣದ್ದಾಗಿದ್ದು, ನಿಖರ ಲೆಕ್ಕಾಚಾರ ಮುಂದಿನ ದಿನಗಳಲ್ಲಿಯದ್ದು  ಸಿಗಲಿದೆ. 2016ರಲ್ಲಿ ಶೇಕಡ 56 ಮತದಾನವಾಗಿತ್ತು. 2008ರಲ್ಲಿ ಶೇಕಡ 58 ಮತದಾನವಾಗಿತ್ತು ಎಂದು ಕೂಡಾ ಮೆಕ್ಡೊನಾಲ್ಡ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss