ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇತ್ತೀಚೆಗೆ ದೊಡ್ಡವರಿಗಿಂತ ಮಕ್ಕಳಿಗೆ ಸ್ಮಾರ್ಟ್ ಫೋನ್ ಗಳ ಬಗ್ಗೆ ಜಾಸ್ತಿ ಗೊತ್ತಿರುತ್ತದೆ. ಮೊಬೈಲ್ ಕೈಗೆ ಸಿಕ್ಕರೆ ಅವರು ಏನೇನೋ ಬಟನ್ ಒತ್ತಿ ಅವಾಂತರ ಮಾಡುವುದೂ ಇದೆ. ಮೂರು ವರ್ಷದ ಪೋರನೊಬ್ಬ ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಅವಾಂತರ ಸೃಷ್ಟಿಸಿದ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.
ಈ ಮೂರು ವರ್ಷದ ಹುಡುಗ ಮಾಡಿದ್ದೇನು ಗೊತ್ತಾ! ತನ್ನ ತಾಯಿಯ ಸ್ಮಾರ್ಟ್ ಫೋನ್ ತೆಗೆದುಕೊಂಡು ಮ್ಯಾಕ್ ಡೊನಾಲ್ಡ್ಸ್ನಲ್ಲಿ ಫುಡ್ ಆರ್ಡರ್ ಮಾಡಿಬಿಟ್ಟಿದ್ದಾನೆ. ಈ ಹುಡುಗ ಫುಡ್ ಆರ್ಡರ್ ಮಾಡಿದ್ದು ದೊಡ್ಡ ವಿಷಯವಲ್ಲ. ಆದರೆ ಭಾರಿ ಉತ್ಸಾಹದಲ್ಲಿ ಬರೋಬ್ಬರಿ 5,400 ರೂ.ಗಳಷ್ಟು ಫುಡ್ ಆರ್ಡರ್ ಮಾಡಿದ್ದು ದೊಡ್ಡ ವಿಷಯವಾಗಿದೆ. ಈ ಸುದ್ದಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.
ಈ ಪೋರ ಫುಡ್ ಆರ್ಡರ್ ಮಾಡಿದ ತಕ್ಷಣ 10 ಬ್ಯಾಗ್ಗಳಲ್ಲಿ ರೆಸ್ಟೋರೆಂಟ್ ಫುಡ್ ಪ್ಯಾಕ್ ಮಾಡಿ ಬಾಲಕನ ಮನೆಗೆ ಕಳುಹಿಸಿಕೊಟ್ಟಿದೆ. ಆರು ಹ್ಯಾಪಿ ಮೀಲ್ಗಳು, ಎಂಟು ವಿಶೇಷ ಆಫರ್ ಆಟಿಕೆಗಳು, 10 ಮಿಲ್ಕ್ಶೇಕ್ಗಳು, ಎಂಟು ಬಾಟಲಿ ನೀರು, ಆರು ಮೀಲ್ಗಳೂ ಹಾಗೂ ಎರಡು ಮ್ಯಾಕ್ ಸಂಡೇಗಳು ಮನೆಗೆ ಬಂದವು.
ಮನೆಗೆ ಫುಡ್ ಬಂದ ತಕ್ಷಣ ಹೆತ್ತವರು ಗೊಂದಲಕ್ಕೊಳಗಾದರು. ಆ ನಂತರ ಇದು ತಮ್ಮ ಮಗನಿಂದ ಆದ ಅವಾಂತರಿಂದ ಶಾಕ್ ಆದರು. ಫುಡ್ ವೇಸ್ಟ್ ಮಾಡಲು ಬಿಡದೇ ಈ ಹುಡುಗನ ತಾಯಿ, ಅಪಾರ್ಟ್ಮೆಂಟ್ನಲ್ಲಿರುವ ಎಲ್ಲ ಸದಸ್ಯರೊಂದಿಗೂ ಫುಡ್ ಹಂಚಿದ್ದಾರೆ.