Thursday, January 28, 2021

Latest Posts

ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಕಡ್ಡಾಯ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರಿಗೆ ಶಿವಸೇನೆ ಸರಕಾರದಿಂದ ಒಂದು ಆದೇಶ ಜಾರಿಯಾಗಿದೆ.
ಹೌದು , ಮುಂಬೈ ತೆರಳುವವರಿಗೆ ಕೊರೋನಾ ನೆಗೆಟಿವ್​ ರಿಪೋರ್ಟ್ ಹೊಂದುವುದು ಕಡ್ಡಾಯ ಎಂದು ಸರಕಾರ ತಿಳಿಸಿದೆ.
ಈಗಾಗಲೇ ಮಹಾರಾಷ್ಟ್ರದಲ್ಲಿ ಕೋರೋನಾ ಸೋಂಕಿನ ಪ್ರಮಾಣ ಕೊಂಚ ಸುಧಾರಿಕೆ ಕಂಡರೂ , ಪೂರ್ಣ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ . ಈ ಹಿನ್ನೆಲೆ ಸರಕಾರ ಕೊರೋನಾ ಕೇಸ್​ ಜಾಸ್ತಿ ಹೊಂದಿರುವ ರಾಜ್ಯದಿಂದ ಸಂಚರಿಸುವ ಪ್ರಯಾಣಿಕರಿಗೆ ನೆಗೆಟಿವ್​ ರಿಪೋರ್ಟ್ ಕಾರ್ಡ್​ ಕಡ್ಡಾಯಗೊಳಿಸಲಾಗಿದೆ.
ವಿಮಾನ, ರೈಲು ಮಾರ್ಗದ ಮೂಲಕ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರಿಗೆ ನೆಗೆಟಿವ್​ ರಿಪೋರ್ಟ್ ಕಡ್ಡಾಯ. ವಿಮಾನ ಮಾರ್ಗದಿಂದ ಬರುವವರು ಮಹಾರಾಷ್ಟ್ರಕ್ಕೆ ಬಂದಿಳಿಯುವ 72 ಗಂಟೆ ಮುನ್ನ ನೆಗೆಟಿವ್​ ರಿಪೋರ್ಟ್ ಹೊಂದಿರಬೇಕು. ಅದೇ ರೀತಿ ರೈಲುಗಳಿಗೆ 96 ಗಂಟೆ ನಿಗದಿ ಮಾಡಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!