Wednesday, August 10, 2022

Latest Posts

ಈ ರಾಜ್ಯದಲ್ಲಿ ಪಟಾಕಿ ನಿಷೇಧವಿದ್ದರೂ, ಮಾರಾಟ-ಬಳಕೆಗೆ 2 ಗಂಟೆಗಳ ಕಾಲಾವಕಾಶ ಕೊಟ್ಟ ಸರಕಾರ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಹೆಚ್ಚಾಗುವ ಭೀತಿಯಿಂದ ಬಹುತೇಕ ರಾಜ್ಯಗಳು ಪಟಾಕಿ ನಿಷೇಧ ಮಾಡಲಾಗಿದೆ. ಪಟಾಕಿ ಈ ಹೊಗೆಯಿಂದ ಕೋವಿಡ್​-19 ಸೋಂಕಿತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದು ಈ ನಿರ್ಧಾರಕ್ಕೆ ಬರಲಾಗಿದೆ.
ಅದ್ರಂತೆ, ಕರ್ನಾಟಕದಲ್ಲೂ ಪಟಾಕಿಗೆ ನಿಷೇಧ ಹೇರಿದ್ದು, ಕೇವಲ ಹಸಿರು ಪಟಾಕಿಗಳನ್ನಷ್ಟೇ ಸಿಡಿಸಲು ಅನುಮತಿ ನೀಡಲಾಗಿದೆ. ಉಳಿದಂತೆ ಪಶ್ಚಿಮ ಬಂಗಾಳ, ದೆಹಲಿ, ಹರಿಯಾಣಗಳಲ್ಲೂ ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ ಹರಿಯಾಣದಲ್ಲಿ ಪಟಾಕಿ ಮೇಲೆ ನಿಷೇಧವಿದ್ದರೂ, ಸಣ್ಣ ಸಡಿಲಿಕೆ ನೀಡಲಾಗಿದೆ.
ಹೌದು, ನಿರ್ಬಂಧವಿದ್ದರೂ ದಿನದಲ್ಲಿ ನಿಗದಿತ ಎರಡು ಗಂಟೆ ಅವಧಿಯಲ್ಲಿ ಮಾರಾಟಗಾರರು ಪಟಾಕಿ ಮಾರಬಹುದು ಮತ್ತು ಪಟಾಕಿ ಸಿಡಿಸಬಹುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss