Thursday, August 11, 2022

Latest Posts

ಈ ರೀತಿ ನೀವು ನಡೆದುಕೊಂಡರೆ ನಿಮ್ಮ ಸಂತೋಷವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ..

ನಾನು ಎಷ್ಟೆಲ್ಲಾ ಮಾಡಿದರೂ ಅವರು ನನ್ನನ್ನು ಪ್ರೀತಿಸುತ್ತಿಲ್ಲ. ನನ್ನನ್ನು ಮೂದಲಿಸುತ್ತಾರೆ, ಬೈಯುತ್ತಾರೆ ಖುಷಿಯಾಗಿ ನೋಡಿಕೊಳ್ಳುತ್ತಿಲ್ಲ, ನನಗೆ ಏಕೆ ಹೀಗೆ ಆಗುತ್ತಿದೆ? ಈ ಪ್ರಶ್ನೆಗಳು ಎಲ್ಲರಿಗೂ ಮೂಡುತ್ತವೆ. ಇದು ನಿಮ್ಮ ಗಂಡ ಅಥವಾ ಹೆಂಡತಿ ಅಷ್ಟೇ ಅಲ್ಲ, ನಿಮ್ಮಮನೆಯವರು ಅಥವಾ ಸ್ನೇಹಿತರು ಯಾರಾದರೂ ನಿಮಗೆ ಬೇಸರ ತರಿಸಿರುತ್ತಾರೆ. ಆ ಕ್ಷಣ ಇವರೆಲ್ಲ ನಮ್ಮವರಾ ಎನಿಸುತ್ತದೆ. ದುಃಖವಾಗುತ್ತದೆ. ಹಾಗಾದರೆ ಇಷ್ಟು ಪ್ರೀತಿ ತೋರಿಸಿಯೂ ಇವರೇಕೆ ಹೀಗೆ ನಡೆದುಕೊಳ್ಳುತ್ತಾರೆ? ಅಥವಾ ನಾವು ಪ್ರೀತಿ ಮಾಡಿದ ರೀತಿಯಲ್ಲಿ ಏನಾದರೂ ತಪ್ಪು ಆಗಿದೆಯಾ ಎಂದು ಅವಲೋಕನ ಮಾಡುವುದು ಒಳ್ಳೆಯದು..ಈ ರೀತಿ ಪ್ರೀತಿಯಿಂದ ನೀವು ನಡೆದುಕೊಂಡರೆ ಎಂತವರನ್ನಾದರೂ ಖುಷಿಯಿಂದ ನೋಡಿಕೊಳ್ಳುವುದು ಸಾಧ್ಯ..
ಒಪ್ಪಿಕೊಳ್ಳಿ: ನಿಮ್ಮವರು ತಿನ್ನುವ ರೀತಿ ನಿಮಗಿಷ್ಟ ಆಗದಿರಬಹುದು, ಈಗ ಸಣ್ಣದೆನಿಸಿದರೂ ಮುಂದೆ ಇದೇ ಜಗಳಕ್ಕೆ ಕಾರಣವಾಗಬಹುದು. ಇಂಥದ್ದನ್ನು ಒಪ್ಪಿಕೊಳ್ಳಿ. ನೀವು ತಿನ್ನುವ ರೀತಿ ಅವರಿಗೂ ವಿಚಿತ್ರ ಎನಿಸಬಹುದು. ಇಂಥದ್ದನ್ನು ಒಪ್ಪಿಕೊಳ್ಳಿ.
ನೀವು ಜಡ್ಜ್ ಅಲ್ಲ: ಅವರು ಆಫೀಸಿನಲ್ಲಿ ನಡೆಯುತ್ತಿದ್ದ ಕೆಟ್ಟ ಕೆಲಸವೊಂದನ್ನು ಬಹಿರಂಗ ಮಾಡಿ ಬಂದಿರುತ್ತಾರೆ. ನೀವು ಹೀಗೆ ನೀನು ಮಾಡುವ ಹಾಗಿಲ್ಲ. ನೀನು ತಪ್ಪು ಎಂದು ಹೇಳದಿರಿ. ಅವರೇನು ಯೋಚಿಸಿ ಆ ನಿರ್ಧಾರಕ್ಕೆ ಬಂದಿರುತ್ತಾರೋ ನಿಮಗೇನು ಗೊತ್ತು? ನೀವು ಯಾವುದಕ್ಕೂ ಜಡ್ಜ್ ಅಲ್ಲ.
ಸಹಾಯ ಮಾಡಿ: ನಿಮ್ಮವರು ಅಡುಗೆ ಚೆನ್ನಾಗಿ ಮಾಡುತ್ತಾರೆ ಅವರಿಗೊಂದು ಹೊಟೆಲ್ ತೆರೆಯುವ ಆಸೆ ಇದ್ದು,ಕಾನ್ಫಿಡೆನ್ಸ್ ಇಲ್ಲದೆ ಸುಮ್ಮನಾದರೆ, ನಿಮ್ಮ ನಾಲ್ಕು ಸ್ನೇಹಿತರನ್ನು ಮನೆಗೆ ಊಟಕ್ಕೆ ಕರಿಯಿರಿ. ಅವರ ಕೈರುಚಿ ಚೆನ್ನಾಗಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಿ.
ಸ್ವಾರ್ಥ ಬೇಡ: ಇದು ಸಣ್ಣ ಪುಟ್ಟ ವಿಷಯಗಳಿಂದಲೂ ಆರಂಭವಾಗುತ್ತದೆ. ಇಬ್ಬರೂ ಕೆಲಸದಲ್ಲಿತ್ತು ಅವನಿಗೆ ಪ್ರಮೋಶನ್ ಆದರೆ ಹೊಟ್ಟೆಕಿಚ್ಚು ಬೇಡ. ಅವರಿಗಾಗಿ ಖುಷಿ ಪಡಿ.
ಅವರ ಖುಷಿಯೇ ನಿಮ್ಮ ಖುಷಿ: ನಿಜವಾದ ಪ್ರೀತಿಯಲ್ಲಿ ತಮ್ಮ ಸಂತೋಷಕ್ಕಿಂತ ಇನ್ನೊಬ್ಬರನ್ನು ಸಂತೋಷಪಡಿಸುವುದೇ ಹೆಚ್ಚು ನೆಮ್ಮದಿ ಕೊಡುತ್ತದೆ.
ಲೆಟರ್ ಬರೆಯಿರಿ: ಕಾಳ ಎಷ್ಟೇ ಬದಲಾಗಿದ್ದರೂ, ಅಕ್ಷರಗಳು ಜಾದು ಮಾಡುತ್ತವೆ. ನಿಮಗೆ ಏನನಿಸುತ್ತದೆ. ಅವರ ಬಗ್ಗೆ ಎನ್ನುವುದನ್ನು ಬರೆದು ಅವರಿಗೆ ನೀಡಿ. ಅವರಿಗೆ ಸ್ಪೆಶಲ್ ಎನಿಸುತ್ತದೆ.
ಸ್ಪೇಸ್ ನೀಡಿ: ಪ್ರೀತಿ ಮಾಡುವುದು ಎಂದರೆ ಯಾವಾಗಲೂ ಅವರ ಜೊತೆಯೇ ಇರಬೇಕು ಎಂದೇನಿಲ್ಲ.ಕೆಲವೊಮ್ಮೆ ಅವರಿಗೆ ಅವರದ್ದೇ ಆದ ಸ್ಪೇಸ್ ಬೇಕಿರುತ್ತದೆ. ಅದನ್ನು ನೀಡಿ. ಸ್ನೇಹಿತರ ಜೊತೆ ಹೋಗುತ್ತೇನೆ ಎಂದರೆ ನಾನು ಬರುತ್ತೇನೆ ಎನ್ನಬೇಡಿ.
ಕರುಣೆ ಇರಲಿ: ಪ್ರೀತಿ ಅಷ್ಟೇ ಅಲ್ಲ, ಕರುಣೆ ಭಾವನೆ ಕೂಡ ನಿಮ್ಮಲ್ಲಿರಲಿ. ಅವರಿಗಷ್ಟೇ ಅಲ್ಲ.ಎಲ್ಲರ ಮೇಲೂ ಕರುಣೆ ಇರಲಿ.
ಅನಿಸಿದ್ದನ್ನು ಹೇಳಿಬಿಡಿ: ಏನು ಅಂದುಕೊಳ್ಳುತ್ತಾರೋ ಎಂದು ಇಷ್ಟವಿಲ್ಲದ್ದನ್ನು ಇದೆ ಎನ್ನಬೇಡಿ. ಈ ನಾಟಕ ತುಂಬಾ ದಿನ ನಡೆಯುವುದಿಲ್ಲ. ಹಾಗಾಗಿ ಇರುವುದನ್ನು ಇರುವ ರೀತಿ ಹೇಳಿ.
ಏಕೆ ಪ್ರೀತಿಸುತ್ತೀರಿ? ನೀವು ಅವರನ್ನು ಏಕೆ ಪ್ರೀತಿಸುತ್ತೀರಿ, ಅವರಲ್ಲಿ ಏನನ್ನು ಇಷ್ಟಪಡುತ್ತೀರಿ? ಇದನ್ನು ಹೇಳಲೇ ಬೇಕು. ಹೇಳುತ್ತಲೇ ಇರಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss