Tuesday, June 28, 2022

Latest Posts

ಈ ಸಮಯ ದೋಷ ಹುಡುಕುವುದಕ್ಕೆ,ಆರೋಪ ಮಾಡುವುದಕ್ಕೆ ಅಲ್ಲ ಬದಲಾಗಿ ಇದು ನೈತಿಕ ಸ್ಥೈರ್ಯ ತುಂಬುವ ಸಮಯ: ಡಿಕೆಶಿ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಿವೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದೀಗಾ ಉಲ್ಟಾ ಹೇಳಿಕೆ ನೀಡಿದ್ದಾರೆ.
ನಾನು ದೋಷ ಹುಡುಕುವುದಿಲ್ಲ,ಆರೋಪ ಕೂಡ ಮಾಡುವುದಿಲ್ಲ.ಅಲ್ಲಿನ ಎಲ್ಲರಿಗೂ ನೈತಿಕ ಸ್ಥೈರ್ಯದ ಅಗತ್ಯ ಇದೆ. ಅದನ್ನು ತುಂಬುವ ಕೆಲಸ ಮಾಡಬೇಕು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರಿಗಳು ಆಸ್ಪತ್ರೆಗೆ ಭೇಟಿ ನೀಡಿ ಇವರಿಗೆ ಸ್ಥೈರ್ಯ ತುಂಬಬೇಕು ಎಂದರು. ಕೊರೋನಾ ದೊಡ್ಡ ರೋಗ. ಈ ರೀತಿ ವ್ಯಾಪಕವಾಗಿ ಹಬ್ಬುತ್ತಿದೆ. ಇದನ್ನು ತಡೆಯುವುದು ಮುಖ್ಯ. ಇದರಲ್ಲಿ ಕೊರೋನಾ ವಾರಿಯರ್ಸ್‌ಗಳ ದೊಡ್ಡ ಜವಾಬ್ದಾರಿ ಇದೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅವರ ಬೆನ್ನಿಗೆ ನಾವು ನಿಂತು ಅವರನ್ನು ಹುರಿದುಂಬಿಸಬೇಕು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss