Sunday, April 11, 2021

Latest Posts

ಉಂಗುರದ ಬದಲು ಭಾರತಾಂಬೆಯ ಫೋಟೋ ಬದಲಿಸಿಕೊಂಡ ಇಂಜಿನಿಯರ್​ ಜೋಡಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮದುವೆ ನಿಶ್ಚಿತಾರ್ಥ ಅಂದ್ರೆ ಮದುಮಗ-ಮದುಮಗಳು ಉಂಗುರ ಬದಲಿಸಿಕೊಳ್ಳುವುದು , ಹೂವಿನ ಮಾಲೆ ಹಾಕುವುದು, ಎರಡೂ ಕುಟುಂಬಸ್ಥರು ತಾಂಬೂಲ ಬದಲಾಯಿಸಿಕೊಂಡು ಸಿಹಿಯೂಟ ಮಾಡುವುದು ರೂಢಿ. ಆದರೆ ಚಿಕ್ಕಮಗಳೂರು ನಗರದ ಹೊರವಲಯದ ಹಿರೇಮಗಳೂರಿನಲ್ಲಿ ರವೀಶ್ ಪಟೇಲ್ ಹಾಗೂ ವಿದ್ಯಾಶ್ರೀ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಮಾತ್ರ ಭಾರತೀಯರ ಪಾಲಿಗೆ
ವಿಶೇಷವೇ ಸರಿ.
ಬೆಂಗಳೂರಿನಲ್ಲಿ ಇಂಜಿನಿಯರ್​ ಕೆಲಸ ಮಾಡುತ್ತಿರುವ ಈ ಜೋಡಿಯ ನಿಶ್ಚಿತಾರ್ಥದ ವಿಶೇಷತೆ ಏನೆಂದರೆ ಉಂಗುರ ಹಾಕುವ ಬದಲು ಭಾರತಾಂಬೆಯ ಫೋಟೋವನ್ನು ಪರಸ್ಪರ ಬದಲಿಸಿಕೊಂಡು ಫೆ.14ರಂದು ‘ಭಾರತಾಂಬೆಯ ದಿನ’ವೆಂದು ವಿಭಿನ್ನವಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮಕ್ಕಳ ನಡೆಗೆ ಪಾಲಕರೂ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಇವರಿಬ್ಬರು ಎಲ್ಲರಿಗೂ ಮಾದರಿಯಾದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss