Friday, August 12, 2022

Latest Posts

ಉಂಗುರವೇನೋ ಧರಿಸುತ್ತೀರಿ ನಿಜ… ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ಬೆರಳಿಗೆ, ಯಾವ ಉಂಗುರ ಧರಿಸಬೇಕು ಎಂಬುದು ತಿಳಿದಿದೆಯೇ? ಇಲ್ಲಿದೆ ಮಾಹಿತಿ

ತುಂಬಾ ಜನ ಚೆಂದಕ್ಕೆಂದು ಉಂಗುರವನ್ನು ಧರಿಸುತ್ತಾರೆ. ಸರಿ ಹೊಂದುವ ಯಾವುದೋ ಬೆರಳಿಗೆ ಚಿನ್ನದ್ದೋ, ಪ್ಲಾಟೀನಮ್‌ದೋ, ಬೆಳ್ಳಿದೋ ಯಾವುದೋ ಒಂದು ಉಂಗುರವನ್ನು ಹಾಕಿಕೊಳ್ಳುತ್ತಾರೆ. ಆದರೆ ಹಾಗೆ ಹಾಕಿಕೊಳ್ಳುವುದು ಸರಿಯಲ್ಲ. ಶಾಸ್ತ್ರ, ಸಂಪ್ರದಾಯ ಮೂಢನಂಬಿಕೆ ಎನಿಸಿದರೂ ಪ್ರತಿ ಶಾಸ್ತ್ರವೂ ವೈಜ್ಞಾನಿಕ ಕಾರಣದೊಂದಿಗೆ ಕುಣಿಕೆಯಾಗಿದೆ. ಉಂಗುರ ಹಾಕಿಕೊಳ್ಳದಿದ್ದರೂ ಪರವಾಗಿಲ್ಲ ಆದರೆ ರಾಶಿ ಆಧಾರವಾಗಿಯೇ ಉಂಗುರವನ್ನು ಧರಿಸಬೇಕು. ಇಲ್ಲದಿದ್ದರೇ ದೇಹದ ಮೇಲೆ ಋಣಾತ್ಮಕ ಪರಿಣಾಮಗಳು ಬೀರಲು ಪ್ರಾರಂಭವಾಗುತ್ತದೆ.

ಮೇಶ ರಾಶಿ: ಈ ರಾಶಿಯವರು ಹವಳವನ್ನು ಧರಿಸಬೇಕು. ಬೆಳ್ಳಿ ಉಂಗುರವನ್ನು ಧರಸಿಸುವಂತಿಲ್ಲ. ತಾಮ್ರ ಮತ್ತು ಚಿನ್ನ ಉಂಗುರವನ್ನು ಧರಿಸಬೇಕು. ಚಿನ್ನಕ್ಕಿಂತಲೂ ಈ ರಾಶಿಯವರಿಗೆ ತಾಮ್ರದ ಉಂಗುರವೇ ಶ್ರೇಷ್ಠ. ಈ ರಾಶಿಯಲ್ಲಿ ಕುಜ ಅಧಿಪತಿಯಾಗಿರುವುದರಿಂದ ಉಂಗುರವನ್ನು ತೋರು ಬೆರಳು ಮತ್ತು ಉಂಗುರ ಬೆರಳಿಗೆ ಧರಿಸಬೇಕು.

ವೃಷಭ ರಾಶಿ: ನೀಲಿ ವಜ್ರವನ್ನು ಬೆಳ್ಳಿ, ಚಿನ್ನ, ಪ್ಲಾಟಿನಮ್‌ನಲ್ಲಿ ಧರಿಸಬೇಕು. ಇಲ್ಲಿ ಶುಕ್ರ ಅಧಿಪತಿಯಾಗಿರುವುದರಿಂದ ಮಧ್ಯ ಅಥವಾ ಕಿರುಬೆರಳಿಗೆ ಉಂಗುರವನ್ನು ಧರಿಸಬೇಕು.

ಮಿಥುನ ರಾಶಿ: ಇವರು ತಿಳಿಹಳದಿ ಬಣ್ಣದ ಹವಳವನ್ನು ಕಂಚು, ಬಂಗಾರದಲ್ಲಿ ಧರಿಸಬಹುದು. ಕಿರು ಬೆರಳಿಗೆ ಮಾತ್ರ ಈ ರಾಶಿಯವರು ಉಂಗುರವನ್ನು ಧರಿಸಬೇಕು. ಏಕೆಂದರೆ ಇಲ್ಲಿ ಬುಧ ಅಧಿಪತಿಯಾಗಿತ್ತಾನೆ.

ಕಟಕ ರಾಶಿ: ಮುತ್ತನ್ನು ಚಿನ್ನ ಅಥವಾ ಬೆಳ್ಳಿಯಲ್ಲಿ ತೋರು ಅಥವಾ ಉಂಗುರ ಬೆರಳಿಗೆ ಧರಿಸಬೇಕು. ಈ ರಾಶಿಯಲ್ಲಿ ಚಂದ್ರ ಅಧಿಪತಿಯಾಗಿರುತ್ತಾನೆ.

ಸಿಂಹ ರಾಶಿ: ಈ ರಾಶಿಯವರು ಹವಳವನ್ನು ತಾಮ್ರ ಅಥವಾ ಬೆಳ್ಳಿಯಲ್ಲಿ ಧರಿಸಬೇಕು. ಈ ರಾಶಿಯಲ್ಲಿ ರವಿ ಅಧಿಪತಿಯಾಗಿರುವುದರಿಂದ ಉಂಗುರ ಬೆರಳಿಗೆ ಉಂಗುರವನ್ನು ಧರಿಸಬೇಕು.

ಕನ್ಯಾ ರಾಶಿ: ಇವರು ತಿಳಿಹಳದಿ ಬಣ್ಣದ ಉಂಗುರವನ್ನು ಬಂಗಾರ, ಕಂಚು ಅಥವಾ  ಬೆಳ್ಳಿಯಲ್ಲಿ ಧರಿಸಬೇಕು. ಮಧ್ಯ ಅಥವಾ ಕಿರುಬೆರಳಿಗೆ ಧರಿಸಬೇಕು.

ತುಲಾ ರಾಶಿ: ವಜ್ರ, ಅಥವಾ ತಿಳಿಹಳದಿ ಬಣ್ಣದ ಉಂಗುರವನ್ನು ಬಂಗಾರ, ಕಂಚು, ಬೆಳ್ಳಿಯಲ್ಲಿ ಧರಿಸಬೇಕು. ಈ ರಾಶಿಯಲ್ಲಿ ಶುಕ್ರ ಅಧಿಪತಿಯಾಗಿರುವುದರಿಂದ ಮಧ್ಯ ಅಥವಾ ಕಿರುಬೆರಳಿಗೆ ಉಂಗುರವನ್ನು ಧರಿಸಬೇಕು.

ವೃಶ್ಚಿಕ ರಾಶಿ: ಈ ರಾಶಿಯವರು ಹವಳ ಅಥವಾ ಮಾಣಿಕ್ಯವನ್ನು ಬಂಗಾರ ಅಥವಾ ತಾಮ್ರದಲ್ಲಿ ಉಂಗುರ ಬೆರಳಿಗೆ ಧರಿಸಬೇಕು. ಈ ರಾಶಿಯಲ್ಲಿ ಕುಜ ಅಧಿಪತಿಯಾಗಿರುತ್ತಾನೆ.

ಧನು ರಾಶಿ: ಮಾಣಿಕ್ಯ ಅಥವಾ ಹವಳವನ್ನು ಚಿನ್ನ, ಪ್ಲಾಟೀನಂ ಅಥವಾ ಬೆಳ್ಳಿಯಲ್ಲಿ ತೋರುಬೆರಳಿಗೆ ಧರಿಸಬೇಕು. ಈ ರಾಶಿಯಲ್ಲಿ ಗುರು ಅಧಿಪತಿಯಾಗಿರುತ್ತಾನೆ.

ಮಕರ ರಾಶಿ: ಈ ರಾಶಿಯವರು ನೀಲಿ ಅಥವಾ ತಿಳಿಹಳದಿ ಬಣ್ಣದ ಉಂಗುರವನ್ನು ಬೆಳ್ಳಿಯಲ್ಲಿ ಮಧ್ಯದ ಬೆರಳಿಗೆ ಧರಿಸಬೇಕು. ಇಲ್ಲಿ ಶನಿ ಅಧಿಪತಿಯಾರುತ್ತಾನೆ.

ಕುಂಭ ರಾಶಿ: ಈ ರಾಶಿಯವರು ನೀಲಿ ಅಥವಾ ತಿಳಿಹಳದಿ ಬಣ್ಣದ ಉಂಗುರವನ್ನು ಬೆಳ್ಳಿ, ತಾಮ್ರ ಬಂಗಾರದಲ್ಲ್ಲಿ ಮಧ್ಯದ ಬೆರಳಿಗೆ ಧರಿಸಬೇಕು. ಇಲ್ಲಿ ಶನಿ ಅಧಿಪತಿಯಾರುತ್ತಾನೆ.

ಮೀನ ರಾಶಿ: ಈ ರಾಶಿಯವರು ಮಾಣಿಕ್ಯ ಅಥವಾ ಹವಳವನ್ನು ಬಂಗಾರ, ಪ್ಲಾಟಿನಂ, ಬೆಳ್ಳಿಯಲ್ಲಿ ತೋರು ಬೆರಳಿಗೆ ಧರಿಸಬೇಕು. ಇಲ್ಲಿ ಗುರು ಅಧಿಪತಿಯಾಗಿರುತ್ತಾನೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss