Wednesday, August 17, 2022

Latest Posts

ಉಕ್ಕೇರಿದ ಸ್ವರ್ಣೆ | ಪುತ್ತಿಗೆ ಮೂಲಮಠ ಜಲಾವೃತ: ಬಜೆ ಪರಿಸರದಲ್ಲಿ ಮನೆ ಧರಾಶಾಹಿ

ಉಡುಪಿ: ಹಿರಿಯಡ್ಕ ಸಮೀಪದಲ್ಲಿ ಸ್ವರ್ಣಾ ನದಿ ಅಪಾಯದ ಮಟ್ಟದ ಮೀರಿ ಹರಿಯುತ್ತಿರುವುದರಿಂದ ನದಿ ತಟದಲ್ಲಿರುವ ಪುತ್ತಿಗೆ ಮೂಲ ಮಠಕ್ಕೆ ಪ್ರವಾಹದ ನೀರು ನುಗ್ಗಿದೆ.

ಪುತ್ತಿಗೆ ವಿದ್ಯಾಪೀಠ ಜಲಾವೃತವಾಗಿದೆ. ಅಲ್ಲದೇ ಮಠದ ಗೋಶಾಲೆಗೂ ನೀರು ನುಗ್ಗಿದೆ. ಸ್ಥಳೀಯರ ನೆರವಿನೊಂದಿಗೆ ಗೋಶಾಲೆಯಲ್ಲಿರುವ ನೂರಾರು ಗೋವುಗಳನ್ನು ಸ್ಥಳಾಂತರ ಮಾಡುವ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮಳೆಯಿಂದಾಗಿ ಕಾರ್ಯಾಚರಣೆಗೆ ತೊಡಕಾಗುತ್ತಿದೆ.

ಮನೆ-ಕೊಟ್ಟಿಗೆ ಧರಾಶಾಹಿ: ಕುಂಭದ್ರೋಣ ಮಳೆಗೆ ಹಿರಿಯಡ್ಕ ಸಮೀಪದ ಬಜೆ ಪರಿಸರದಲ್ಲಿ ಮನೆಯೊಂದು ಧರಾಶಾಹಿಯಾಗಿದೆ. ಎರಡು ದನದ ಕೊಟ್ಟಿಗೆಗಳು ಕೂಡ ಕುಸಿದು ಬಿದ್ದಿವೆ. ಇನ್ನಷ್ಟು ಮನೆಗಳು ಅಪಾಯದಲ್ಲಿವೆ. ಶೀರೂರು ಪರಿಸರದಲ್ಲಿಯೂ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಮಠ ಜಲಾವೃತವಾಗುವ ಭೀತಿ ಇದೆ. ಇಲ್ಲಿಯೂ ಗೋಶಾಲೆಯಲ್ಲಿ ನೂರಾರು ಗೋವುಗಳಿವೆ. ಶೀರೂರು ಬಳಿಯೂ ನದಿಯ ಇಕ್ಕೆಲಗಳಲ್ಲಿ ಮನೆಗಳು ಅಪಾಯದಲ್ಲಿವೆ. ಎರಡು ಮನೆಗಳು ಕುಸಿದ ಹಾಗೂ ಕೆಲವೆಡೆ ಜಾನುವಾರುಗಳು ನೆರೆಗೆ ಕೊಚ್ಚಿ ಹೋದ ಮಾಹಿತಿ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!