Sunday, August 14, 2022

Latest Posts

ಉಕ್ರೇನ್‌ನಲ್ಲಿ ಮಿಲಿಟರಿ ಸಾರಿಗೆ ವಿಮಾನ ಅಪಘಾತ: 22 ಸಾವು

ಉಕ್ರೇನ್: ಉಕ್ರೇನ್‌ನ ಮಿಲಿಟರಿ ಸಾರಿಗೆ ವಿಮಾನದ ಅಪಘಾತ ಸಂಭವಿಸಿದ್ದು, 22 ಮಂದಿ ಮೃತಪಟ್ಟಿದ್ದಾರೆ.
ಈಶಾನ್ಯ ಉಕ್ರೇನ್‌ನಲ್ಲಿ ಘಟನೆ ಸಂಭವಿಸಿದ್ದು, ವಾಯುಪಡೆಯ ಪೈಲಟ್‌ಗಳು,ತರಬೇತಿ ಸೈನಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ22 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ ಎನ್ನುವ ಮಾಹಿತಿ ಇದೆ. ಉಕ್ರೇನ್‌ನ ತುರ್ತು ಸೇವೆ ವಿಭಾಗ ಈ ಬಗ್ಗೆ ಮಾಹಿತಿ ನೀಡಿದ್ದು, ವಿಮಾನ ನಿಲ್ದಾಣದಿಂದ ಕೇವಲ ಎರಡು ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ. ಇನ್ನೂ ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss