ಇಂಫಾಲ್: ಮಾಯನ್ಮಾರ್ ಗಡಿಯಲ್ಲಿ ಉಗ್ರರು ದಾಳಿ ನಡೆಸಿದ್ದು, ಅಸ್ಸಾಂ ರೈಫಲ್ಸ್ ಯೂನಿಟ್ ನ ಮೂವರು ಯೋಧರು ಮಡಿದಿದ್ದಾರೆ.
ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಸ್ಥಳೀಯ ಪೀಪಲ್ಸ್ ಲಿಬರೇಷನ್ ಸೇನೆಯ ಉಗ್ರರು ದಾಳಿ ನಡೆಸಿದ್ದು, 3 ಮಂದಿ ನಾಲ್ಕನೇ ಅಸ್ಸಾಂ ರೈಫಲ್ಸ್ ಘಟಕದ ಯೋಧರು ಹುತಾತ್ಮರಾಗಿದ್ದು, 4 ಮಂದಿ ಗಾಯಗೊಂಡಿದ್ದಾರೆ.
ಭಯೋತ್ಪಾದಕರು ಮೊದಲು ಐಇಡಿ ಸ್ಫೋಟವನ್ನು ನಡೆಸಿದ್ದು, ನಂತರ ಸೈನಿಕರ ಮೇಲೆ ಗುಂಡು ಹಾರಿಸಿದರು. ಇಂಫಾಲ್ನಿಂದ 100 ಕಿ.ಮೀ ದೂರದಲ್ಲಿರುವ ಪ್ರದೇಶಕ್ಕೆ ಬಲವರ್ಧನೆಗಳನ್ನು ರವಾನಿಸಲಾಗಿದೆ ಎಂದು ಮಾಹಿತಿ ತಿಳಿದಿದೆ.
The terrorists first carried out an IED blast and then fired at the troops. Reinforcements have been rushed to the area which is 100 km from Imphal: Sources https://t.co/WgGVnZM8FQ
— ANI (@ANI) July 30, 2020