Sunday, June 26, 2022

Latest Posts

ಉಚ್ಚಿಲ: ಭೀಕರ ರಸ್ತೆ ಅಪಘಾತ ಓರ್ವ ಚಾಲಕ ಸಾವು ಮತ್ತೋರ್ವ ಚಾಲಕ ಗಾಯ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಸೀದಿ ಬಳಿ ನಿಂತಿದ್ದ ಲಾರಿಯೊಂದಕ್ಕೆ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಚಾಲಕ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ 4:30 ಸುಮಾರಿಗೆ ನಡೆದಿದೆ.

ಮೃತಪಟ್ಟ ಚಾಲಕನನ್ನು ಧಾರವಾಡ ಮೂಲದ ಕಲಘಟಗಿಯ ಮಹಾಂತೇಶ್ ಗೌಳಿ (33) ಹಾಗೂ ಗಾಯಗೊಂಡ ಚಾಲಕನನ್ನು ಹುಬ್ಬಳ್ಳಿ ಮೂಲದ ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ.

 

ಈರುಳ್ಳಿ ಲೋಡ್ ಹೊತ್ತು ಮಂಗಳೂರಿನತ್ತ ಸಾಗುತ್ತಿದ್ದ ಒಂದು ಲಾರಿ, ಕಡ್ಲೆ ಹಿಟ್ಟು ಲೋಡ್ ಹೊತ್ತು ಮಂಗಳೂರಿನತ್ತ ತೆರಳುವಾಗ ಹೆದ್ದಾರಿ ನಡುವೆ ಕೆಟ್ಟು ನಿಂತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದದಿದ್ದು, ಈ ಭೀಕರ ಅಪಘಾತ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss