ಉಡಪಿ| ಭಾನುವಾರವೂ ಜನರಿಗೆ ಸಿಗಲಿದೆ ಉಚಿತ ಬಸ್ ಸೇವೆ: ಶಾಸಕ ಕೆ. ರಘುಪತಿ ಭಟ್

0
40

ಉಡಪಿ: ರಾಜ್ಯ ಸರಕಾರ ಭಾನುವಾರದ ಲಾಕ್ ಡೌನ್ ರದ್ದುಗೊಳಿಸಿರುವುದರಿಂದ ಉಡುಪಿ ಜನತೆಗಾಗಿ ವ್ಯವಸ್ಥೆಗೊಳಿಸಲಾದ ಉಚಿತ ಬಸ್ಸಿನ ಸೇವೆ ಭಾನುವಾರವು ಮುಂದುವರಿಯಲಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.

ಆರು ದಿನಗಳ ಉಚಿತ ಬಸ್ಸಿನ ಸೇವೆಗೆ ಇಂದು ಕೊನೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಬಸ್ಸು ನಿಲ್ದಾಣವನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ಭಾನುವಾರದ ಲಾಕ್ ಡೌನ್ ರದ್ದುಗೊಂಡಿರುವುದರಿಂದ ಹಾಗೂ ಜನರ ಬೇಡಿಕೆಯಂತೆ ಉಚಿತ ಬಸ್ಸು ಸೇವೆ ಮುಂದುವರಿಯಲಿದೆ. ಸಂಜೆ ಬಸ್ಸು ನಿಲ್ದಾಣ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಸಹಯೋಗದೊಂದಿಗೆ ನಗರಸಭಾ ಸದಸ್ಯರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಲ್ಲಿ ಉಡುಪಿ ಮತ್ತು ಬ್ರಹ್ಮಾವರ ಭಾಗದಲ್ಲಿ ಒಂದು ವಾರ ಕಾಲ ಉಚಿತ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮಗಳೊಂದಿಗೆ 8 ಮಾರ್ಗಗಳಲ್ಲಿ ಒಟ್ಟು 13 ಬಸ್ಸುಗಳು ಓಡಾಡುತ್ತಿವೆ.

LEAVE A REPLY

Please enter your comment!
Please enter your name here