Wednesday, June 29, 2022

Latest Posts

ಉಡುಪಿಗೂ ಇಲ್ಲ ‘ಇಂಗ್ಲೆಂಡ್’ ಭಯ: ಬಂದ 8 ಮಂದಿಗೂ ಕೋವಿಡ್ ನೆಗೆಟಿವ್

ಹೊಸ ದಿಗಂತ ವರದಿ ಉಡುಪಿ:

ಕೋವಿಡ್ ಸಾಂಕ್ರಾಮಿಕದಿಂದ ಕೊಂಚ ನಿಟ್ಟುಸಿರು ಬಿಡುತ್ತಿರುವ ಉಡುಪಿ ಜಿಲ್ಲೆಗೆ ಸದ್ಯ ಬ್ರಿಟನ್ ಹೊಸ ರೂಪದ ಕೊರೋನಾ ವೈರಸ್‌ನ ಆತಂಕವಿಲ್ಲ. ಇಂಗ್ಲೆಂಡಿನಿಂದ ಜಿಲ್ಲೆಗೆ ಮರಳಿದ ಎಂಟು ಮಂದಿಯ ಪರೀಕ್ಷಾ ವರದಿ ‌ನೆಗೆಟಿವ್ ಬಂದಿದೆ.

ಸೋಮವಾರ ಜಿಲ್ಲೆಯ ಕಾರ್ಕಳ ತಾಲೂಕಿಗೆ ನಾಲ್ವರು, ಉಡುಪಿ ತಾಲೂಕಿಗೆ ಮೂವರು ಮತ್ತು ಕುಂದಾಪುರ ತಾಲೂಕಿಗೆ ಒಬ್ಬರು ಸೇರಿ ಒಟ್ಟು 8ಮಂದಿ ಇಂಗ್ಲೆಂಡಿನಿಂದ ಬಂದಿದ್ದರು. ಅವರ ಗಂಟಲ ದ್ರವದ ಮಾದರಿಗಳನ್ನು ನಿನ್ನೆ ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಇಂದು ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ಎಲ್ಲವೂ ನೆಗೆಟಿವ್ ಆಗಿವೆ.

ವಾರದ ನಂತರ ಮತ್ತೊಮ್ಮೆ ಪರೀಕ್ಷೆ:
ಪರೀಕ್ಷಾ ವರದಿ ನೆಗೆಟಿವ್ ಬಂದರೂ ಎಂಟು ಮಂದಿಯ ಗೃಹ ದಿಗ್ಬಂಧನ ಮುಂದುವರಿಯಲಿದೆ. ಹೋಂ ಕ್ವಾರಂಟೈನ್ ನಲ್ಲಿರುವ ಅವರ ಗಂಟಲ ದ್ರವ ಮಾದರಿಯನ್ನು ಏಳು ದಿನಗಳ ನಂತರ ಇನ್ನೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss