Wednesday, August 17, 2022

Latest Posts

ಉಡುಪಿಯಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಪೀಠ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜೆ

ಉಡುಪಿ: ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮಚಂದ್ರ ಪ್ರಭುವಿಗೆ ಮಂದಿರದ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯುತ್ತಿದ್ದರೆ, ಉಡುಪಿಯಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಪೀಠ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿತು.
ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಮಂದಿರದ ಹೋರಾಟಕ್ಕೆ ತಮ್ಮಕೊನೆಯ ಉಸಿರು ಇರುವವರೆಗೂ ಅಹರ್ನಿಶಿ ಶ್ರಮಿಸಿದ ಪೇಜಾವರ ಶ್ರೀವಿಶ್ವೇಶತೀರ್ಥರಿಗೆ ಭಕ್ತಿ, ಗೌರವ ಸಮರ್ಪಣೆ ನಡೆಸಲಾಯಿತು.
ಅಯೋಧ್ಯೆ ರಾಮ ಜನ್ಮಭೂಮಿಯ ಪವಿತ್ರ ಆಂದೋಲನಕ್ಕೆ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರ ಕೊಡುಗೆ, ಮಾರ್ಗದರ್ಶನ ಹಾಗೂ ಅವರು ನೀಡಿದ ಸ್ಫೂರ್ತಿ, ನೇತೃತ್ವ ಎಲ್ಲವನ್ನೂ ಸ್ಮರಿಸಿಕೊಳ್ಳಲಾಯಿತು. ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥರ ಭಾವಚಿತ್ರ, ಪೀಠಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಠದ ಶಿಷ್ಯರು ಪಾರಾಯಣ ನಡೆಸಿ, ಮಂಗಳಾರತಿ ಬೆಳಗಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!