Thursday, July 7, 2022

Latest Posts

ಉಡುಪಿಯಲ್ಲಿ ಸದ್ಯ ಲಾಕ್ ಡೌನ್ ಇಲ್ಲ,ಜನಪ್ರತಿನಿಧಿಗಳ ಸಭೆ ನಂತರ ತೀರ್ಮಾನ : ಜಿಲ್ಲಾಧಿಕಾರಿ ಜಿ. ಜಗದೀಶ

ಉಡುಪಿ: ಜಿಲ್ಲೆಯಲ್ಲಿ ಸದ್ಯ ಲಾಕ್ ಡೌನ್ ಇಲ್ಲ. ನಾಳೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಭೆ ಕರೆದು ಲಾಕ್ ಡೌನ್ ಕುರಿತು ಚರ್ಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಗೆ ಮುಕ್ತ ಪ್ರವೇಶ ಇರುವುದಿಲ್ಲ. ಜಿಲ್ಲೆಯ ಗಡಿಯನ್ನು ಸೀಲ್ ಡೌನ್ ಮಾಡಿ, ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸುತ್ತೇವೆ. ಉಡುಪಿ ಜಿಲ್ಲೆಯಿಂದ ಹೊರಗಡೆ ಹೋಗಲು ಹಾಗೂ ಜಿಲ್ಲೆಯ ಒಳ ಬರಲು ಸಮಯ ನಿಗದಿ ಮಾಡಲಾಗುತ್ತದೆ ಎಂದಿದ್ದಾರೆ.
ಕೋವಿಡ್ -19 ಸೋಂಕಿನ ನಿಯಂತ್ರಣಕ್ಕಾಗಿ ಕೈಗೊಳ್ಳುವ ಎಲ್ಲ ನಿಯಮಗಳನ್ನು ಜನ ಪ್ರತಿನಿಧಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss