Wednesday, July 6, 2022

Latest Posts

ಉಡುಪಿಯ ನವವಧು ಸೇರಿದಂತೆ ಕುಟುಂಬದ ಏಳು ಮಂದಿಗೆ ಕೊರೋನಾ ದೃಢ

ಉಡುಪಿ: ಇತ್ತೀಚೆಗೆ ವಿವಾಹವಾದ ನವವಧುವಿನ ಕುಟುಂಬದ ಏಳು ಮಂದಿಗೆ ನೋವೆಲ್ ಕೊರೋನಾ ವೈರಸ್ ಕಾಡಿದೆ.
ಮೂವರು ಮಕ್ಕಳು, ಮೂವರು ಮಹಿಳೆಯರ ಸಹಿತ 7 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.‌
ಕಾಪು ತಾಲೂಕು ಮಲ್ಲಾರಿನ ಕೊಂಬಗುಡ್ಡೆಯ ಕುಟುಂಬ ಯುವತಿಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ನವವಧುವಿಗೆ ಜು. 6ರಂದು ಸೋಂಕು ದೃಢಪಟ್ಟಿತ್ತು.
ಕಾಪು ಮಲ್ಲಾರಿನ ವಧುವಿನ ಮನೆಯಲ್ಲಿ ಮದುವೆ ಪೂರ್ವ ನಡೆಯುವ ಮೆಹೆಂದಿ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಏಳು ಜನರಿಗೆ ಸೋಂಕು ಪತ್ತೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss