Thursday, August 11, 2022

Latest Posts

ಉಡುಪಿಯ ಮಗು ಅಪಹರಣ ಪ್ರಕರಣ ಸುಖಾಂತ್ಯ: ಅರೋಪಿಯನ್ನು ಹೆಡೆಮುರಿಕಟ್ಟಿ ತಂದ ಖಾಕಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಉಡುಪಿ:

ನಿನ್ನೆ ಬೆಳಗ್ಗೆ ನಗರದ ಕರಾವಳಿ ಬೈಪಾಸ್ ಪರಿಸರದಿಂದ ಅಪಹರಣಕ್ಕೆ ಒಳಗಾದ ಮಗುವನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿ ಸಹಿತ ಪತ್ತೆ ಮಾಡಿದ್ದಾರೆ.
ಆರೋಪಿ ಬಾಗಲಕೋಟೆಯ ಪರಶು ಎಂಬಾತನನ್ನು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನಿನ್ನೆ ರಾತ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಎರಡು ವರ್ಷ ನಾಲ್ಕು ತಿಂಗಳ ಮಗು ಶಿವರಾಜ್ ಮತ್ತು ಆರೋಪಿಯನ್ನು‌ ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆ ತಂದಿದ್ದಾರೆ.
ಆರೋಪಿಯು ನಿನ್ನೆ ಬೆಳಗ್ಗೆ ಕರಾವಳಿ ಬೈಪಾಸ್ ನಿಂದ ಸಿಟಿಬಸ್ಸಿನಲ್ಲಿ ಪ್ರಯಾಣಿಸಿ ಸಂತೆಕಟ್ಟೆಯಲ್ಲಿ ಇಳಿದಿದ್ದ. ಸಂತೆಕಟ್ಟೆಯಲ್ಲಿ ಆತ ಮಗುವಿನೊಂದಿಗೆ ಕೆಂಪು ಬಣ್ಣದ ಬಸ್ಸು ಹತ್ತಿರುವುದಾಗಿ ಮಹಿಳೆಯೊಬ್ಬರು ನೀಡಿದ ಮಾಹಿತಿಯಂತೆ ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿತು.
ಬಳಿಕ ಆತ ಹತ್ತಿರುವ ಬಸ್ಸು ಪತ್ತೆ ಹಚ್ಚಿದ ತಂಡ, ಬಸ್ಸು ನಿರ್ವಾಹಕರಲ್ಲಿ ಮಾಹಿತಿ ಕಲೆ ಹಾಕಿದ್ದರು. ಆರೋಪಿ ಮಗುವಿನೊಂದಿಗೆ ಭಟ್ಕಳದಲ್ಲಿ ಇಳಿದ್ದನ್ನು ಖಚಿತಪಡಿಸಿಕೊಂಡ ಪೊಲೀಸ್ ತಂಡ, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಭಟ್ಕಳ, ಕುಮಟಾ ಸೇರಿದಂತೆ ಕಾರವಾರ ಪೊಲೀಸರು ಹುಡುಕಾಟ ಆರಂಭಿಸಿದರು. ರಾತ್ರಿ ವೇಳೆ ಕುಮಟಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.
ಬಾಗಲಕೋಟೆಯ ದಂಪತಿಯ ಮಗು ಅಪಹರಣದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss