Friday, July 1, 2022

Latest Posts

ಉಡುಪಿ| ಆನ್ ಲೈನ್ ನಲ್ಲಿ 2020ನೇ ಸಾಲಿನ ಪರಿಸರ ದಿನಾಚರಣೆ ಸ್ಪರ್ಧೆ

ಉಡುಪಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ವತಿಯಿಂದ 2020ನೇ ಸಾಲಿನ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲೆ / ಸೃಜನಾತ್ಮಕ / ವ್ಯಂಗಚಿತ್ರ / ಸ್ಥೂಲ ಚಿತ್ರ, ಪ್ರಬಂಧ ಸ್ವರ್ಧೆ, ಬ್ಲಾಗಿಂಗ್, ಡಿ.ಐ.ವೈ. ವೀಡಿಯೋ ಸ್ಪರ್ಧೆಯನ್ನು ಹಾಗೂ ಜೀವ ವೈವಿಧ್ಯತೆಯ ಕುರಿತಾಗಿ ವೆಬಿನಾರ್ ಆಯೋಜಿಸಲಾಗಿದೆ.

ಚಿತ್ರಕಲೆ / ಸೃಜನಾತ್ಮಕ / ವ್ಯಂಗಚಿತ್ರ / ಸ್ಥೂಲ ಚಿತ್ರ, (ವಯೋಮಿತಿ 3-6ವರ್ಷಗಳು 7-12ವರ್ಷ ಹಾಗೂ 13-18ವರ್ಷಗಳು) ಪ್ರಬಂಧ ಸ್ವರ್ಧೆ (500 ಪದ ಮೀರದಂತೆ ಬರೆಯಬೇಕು) ವಯೋಮಿತಿ 7-12ವರ್ಷಗಳು 13-18ವರ್ಷ), ಬ್ಲಾಗಿಂಗ್, (ವಯೋಮಿತಿ 13-18ವರ್ಷ) ಡಿ.ಐ.ವೈ. ವಿಡಿಯೋ, ಹೈಡ್ರೋಪೋನಿಕ್ಸ್, ವರ್ಟಿಕಲ್‌ಗಾರ್ಡನ್, ಸಾಬೂನು ಮತ್ತು ಸ್ಯಾನಿಟೈಸರ್, ಕಾಂಪೋಸ್ಟ್ ನಿರ್ವಹಣೆ, ವೈವ್‌ಕಾಂಪೋಸ್ಟ್, ಪಕ್ಷಿ ಸಂರಕ್ಷಣೆ, ಪರಿಸರ ಸ್ನೇಹಿ ಕಲೆ ಮತ್ತು ಕರವಸಗಳನ್ನು ಮಾಡುವುದು, ಮರಳು ಕಲೆ ಕಥೆ ಹೇಳುವುದು, ಮಾಸ್ಕ್ ತಯಾರಿಸುವುದು, ಖಾದ್ಯತಯಾರಿಕೆ, ಇ-ತ್ಯಾಜ್ಯ ವಿಡಿಯೋ, ಪರಿಸರ ಸ್ನೇಹಿ ಅಟಿಕೆಗಳು, ಮಾಸ್ಕ್ ವಿಲೇವಾರಿ, ತರಕಾರಿ ಶುಚಿಗೊಳಿಸುವುದು ಇತ್ಯಾದಿ ಹಾಗೂ ಜೀವ ವೈವಿಧ್ಯತೆಯ ಕುರಿತಾಗಿ ವೆಬಿನಾರ್ ಸ್ಪರ್ಧೆ ಆಯೋಜಿಸಲಾಗಿದೆ.

ಜೂ. 1ರಿಂದ 30ರ ವರೆಗೆ ವಿವಿಧ ವಯೋಮಿತಿಯವರು ಆನ್‌ಲೈನ್ ಮುಖಾಂತರ ಹೆಸರನ್ನು ನೋಂದಾಯಿಸಿ ಈ ಸ್ಪರ್ಧೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳಬೇಕೆಂದು ಉಡುಪಿಯ ಪರಿಸರ ಅಧಿಕಾರಿಯವರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಯು ಮಂಡಳಿ ವೆಬ್‌ಸೈಟ್: www.kspcb.gov.in ನಲ್ಲಿ ಲಭ್ಯವಿದೆ ಎಂದು ಪರಿಸರ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss