Wednesday, July 6, 2022

Latest Posts

ಉಡುಪಿ| ಈ ಬಾರಿ ನಾಗರಪಂಚಮಿ ಹಬ್ಬವನ್ನು ಸಾಮೂಹಿಕವಾಗಿ ನಡೆಸಲು ಅವಕಾಶವಿಲ್ಲ: ಜಿಲ್ಲಾಧಿಕಾರಿ

ಉಡುಪಿ: ನಾಡಿಗೆ ದೊಡ್ಡ ಹಬ್ಬವೆಂದೇ ಕರೆಯಲಾಗುವ ಶ್ರಾವಣ ಮಾಸದ ನಾಗರ ಪಂಚಮಿ ಆಚರಣೆಗೂ ಈ ಬಾರಿ ಕೊರೋನಾ ವೈರಸ್ ಅಡ್ಡಿ ಮಾಡಿದೆ. ಈ ತಿಂಗಳ 25ರಂದು ಬರುವ ನಾಗ ಪಂಚಮಿ ಹಬ್ಬ ಸಾಮೂಹಿಕವಾಗಿ ನಡೆಯುವುದಿಲ್ಲ.
ಅತೀ ಹೆಚ್ಚು ಕೋವಿಡ್ ದೃಢ ಪ್ರಕಣಗಳಿರುವ ರಾಜ್ಯದ 11 ಜಿಲ್ಲೆಗಳ ಜಿಲ್ಲಾಧಿಕಾರಿ ಅವರೊಂದಿಗೆ ಸೋಮವಾರ ವೀಡಿಯೋ ಕಾನ್ಫರೆನ್ಸ್ ನಡೆಸಿರುವ ಮುಖ್ಯಮಂತ್ರಿಗಳು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಉಡುಪಿ ಜಿಲ್ಲೆಯೂ ಸೇರಿದಂತೆ ಒಟ್ಟು 11ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ 2-3 ಜಿಲ್ಲೆಯವರು ದೇವಸ್ಥಾನ ಪ್ರವೇಶಕ್ಕೂ ನಿರ್ಬಂಧ ಹೇರಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ಕೇಂದ್ರ ಸರಕಾರದಿಂದ ಬಂದಿರುವ ಎಸ್‌ಒಪಿಯಲ್ಲಿ ದೇವಸ್ಥಾನಗಳಿಗೆ ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ ಹಬ್ಬ ಹರಿದಿನಗಳನ್ನು ಮಾಡಲು ಅವಕಾಶವಿಲ್ಲ. ಆದ್ದರಿಂದ ಸಾರ್ವಜನಿಕವಾಗಿ ಯಾವುದೇ ಹಬ್ಬ ಹರಿದಿನಗಳನ್ನು ನಡೆಸಲು ಅವಕಾಶವಿಲ್ಲ ಎಂದು ಮುಖ್ಯಮಂತ್ರಿಯವರು ಸ್ಪಷ್ಟವಾಗಿ ಹೇಳಿದ್ದಾರೆ.
ಆದ್ದರಿಂದ ಯಾವುದೇ ಹಬ್ಬ ಹರಿದಿನಗಳನ್ನು ಮನೆಗಳಲ್ಲಿ ಮಾತ್ರ ಆಚರಿಸಬಹುದಾಗಿದೆ. ಹಾಗಾಗಿ ಮುಂದೆ ಶ್ರಾವಣ ಮಾಸದಲ್ಲಿ ಬರುವ ಯಾವುದೇ ಹಬ್ಬಗಳು ಸಾಮೂಹಿವಾಗಿ ನಡೆಯುವುದಿಲ್ಲ. ಈ ಬಾರಿ ನಾಗರಪಂಚಮಿ ಹಬ್ಬ ಕೂಡ ಸಾಮೂಹಿಕವಾಗಿ ನಡೆಸಲು ಅವಕಾಶವಿಲ್ಲ ಎಂದು ಮುಖ್ಯಮಂತ್ರಿಗಳ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss