Saturday, July 2, 2022

Latest Posts

ಉಡುಪಿ| ಉತ್ಸಾಹದಿಂದ ಸಾಗುತ್ತಿದೆ ಮತದಾನ: ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ ವೃದ್ಧರು

ಹೊಸದಿಗಂತ ವರದಿ,ಉಡುಪಿ:

ಕೋವಿಡ್ ಸಾಂಕ್ರಾಮಿಕದ ನಡುವೆ ಗ್ರಾಮ ಸಮರ ನಡೆಯುತ್ತಿದೆ. ಕೊರೋನಾ ಸಂದಿಗ್ಧ ಇನ್ನೂ ಮುಗಿದಿಲ್ಲ. ಈ ಮಧ್ಯೆ ಚುನಾವಣೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆ ಕ್ಷೀಣಿಸುತ್ತದಾ ಎಂಬ ಚುನಾವಣಾ ಆಯೋಗದ ಆತಂಕವನ್ನು ಮತದಾರರು ದೂರ ಮಾಡಿದ್ದಾರೆ.

ಅಷ್ಟೇ ಅಲ್ಲ ಹಿರಿಯ ಮತದಾರರು ಕೂಡ ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮುಂಜಾನೆ 7ಗಂಟೆಯಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾರರು ಮತ ಚಲಾಯಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬೆಳಗ್ಗಿನ ಚಳಿಗೆ ಹೊರ ಬಾರದ ಹಿರಿಯರು ಹೊತ್ತೇರುತ್ತಿದ್ದಂತೆ ಮತಗಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಮನೆಯವರೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡುತ್ತಿದ್ದಾರೆ.

ಕಾರ್ಕಳ ತಾಲೂಕಿನ ನೀರೆ ಗ್ರಾ.ಪಂ. ವ್ಯಾಪ್ತಿಯ ಬೈಲೂರು ಸ.ಪ.ಪೂ. ಕಾಲೇಜಿನಲ್ಲಿರುವ ಮತಗಟ್ಟೆಯಲ್ಲಿ 70ರ ಹರೆಯದ ಲಲಿತಾ ಮತ್ತು 71 ವರ್ಷ ಪ್ರಾಯದ ಶೇಷಿ ಅವರು ಮನೆಯವರ ಸಹಾಯದಿಂದ ಆಗಮಿಸಿ ಮತ ಚಲಾಯಿಸಿದರು.

ಶಿರ್ಲಾಲು ಗ್ರಾ.ಪಂ. ವ್ಯಾಪ್ತಿಯ ಶಿರ್ಲಾಲು ಸೂಡಿ ಸ.ಹಿ.ಪ್ರಾ. ಶಾಲೆಯ ಮತಗಟ್ಟೆಯಲ್ಲಿ 70 ವರ್ಷ ಪ್ರಾಯದ ನೇತ್ರಾವತಿ ಗಾಲಿ ಕುರ್ಚಿಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ ಅಪಘಾತಕ್ಕೊಳಗಾಗಿ ಬೆಡ್ ರೆಸ್ಟ್ ನಲ್ಲಿರುವ ಸುಧಾಕರ ಶೆಟ್ಟಿ ಮನೆಯವರ ಸಹಾಯದಿಂದ ಬಂದು ಮತ ಹಾಕಿದರು.

ಮಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀಗುರುಕುಲ ಅನುದಾನಿತ ಹಿ.ಪ್ರಾ. ಶಾಲೆಯ ಮತಗಟ್ಟೆಯಲ್ಲಿ 76ರ ಹರೆಯದ ಲಕ್ಷ್ಮೀ ಅವರು ಮಗಳ ನೆರವಿನಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss