Tuesday, August 16, 2022

Latest Posts

ಉಡುಪಿ| ಕಳೆದ ಎರಡು ದಿನಗಳಲ್ಲಿ 6 ಮಂದಿ ಸ್ಥಳೀಯರಿಗೆ ಕೊರೋನಾ ಸೋಂಕು

ಉಡುಪಿ: ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ನೋವೆಲ್ ಕೊರೋನಾ ವೈರಸ್ ಸೋಂಕು ಪತ್ತೆಯಾಗುತ್ತಿರುವುದು ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಸದ್ಯದ ವರದಿಯಂತೆ ಈವರೆಗೆ ಆರು ಮಂದಿ ಸ್ಥಳೀಯರಲ್ಲಿ ಸೋಂಕು ಕಂಡುಬಂದಿದೆ.

ವೈದ್ಯಕೀಯ ವಿಶ್ಲೇಷಣೆಯ ಪ್ರಕಾರ ಇದು ಸಮುದಾಯದಲ್ಲಿ ಸೋಂಕು ಹರಡಿರುವ ಲಕ್ಷಣವಾದ್ದರಿಂದ ಇದನ್ನು ದೃಢಪಡಿಸಿಕೊಳ್ಳಲು ಕೋವಿಡ್ ಮರು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದ್ದರಿಂದ ಭಾನುವಾರದ ನಾಲ್ವರು ಮತ್ತು ಸೋಮವಾರದ ಇಬ್ಬರ ಗಂಟಲ ದ್ರವದ ಮಾದರಿಯನ್ನು ಕೂಡ ಮರು ಪರೀಕ್ಷೆ ನಡೆಸಲಾಗುತ್ತದೆ.

ಕಾರ್ಕಳದ 22ರ ಹರೆಯದ ತುಂಬು ಗರ್ಭಿಣಿಯ ಕೋವಿಡ್ ಮರು ಪರೀಕ್ಷೆಯನ್ನು ಆದ್ಯತೆಯ ಮೇಲೆ ನಡೆಸಲಾಗುತ್ತಿದ್ದು, ಇಂದು ವರದಿ ಬರುವ ಸಾಧ್ಯತೆ ಇದೆ. ಹೆಚ್ಚಾಗಿ ಗರ್ಭಿಣಿಯರು ಸೂಕ್ಷ್ಮವಾಗಿರುವುದರಿಂದ ಅವರಿಗೆ ಮರು ಪರೀಕ್ಷೆ ನಡೆಸುತ್ತೇವೆ. ಅದೇ ಪ್ರಕಾರ ಕಾರ್ಕಳದ ಗರ್ಭಿಣಿಗೂ ಪರೀಕ್ಷೆ ನಡೆಸಲಾಗಿದೆ. ಅವರಿಗೆ ಸೋಂಕು ಹೇಗೆ ತಗುಲಿದೆ ಎಂಬ ಮಾಹಿತಿಯೇ ಇಲ್ಲ. ನಮಗೆ ಯಾವ ಕುರುಹು ಕೂಡ ಸಿಕ್ಕಿಲ್ಲ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಎರಡೂ ದಿನ ಸ್ಥಳೀಯವಾಗಿ ಪಾಸಿಟಿವ್ ವರದಿ ಬಂದವರ ಗಂಟಲ ದ್ರವ ಮಾದರಿಯನ್ನು ಮರು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆ ವರದಿಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಡಿಎಚ್‌ಒ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss