Saturday, July 2, 2022

Latest Posts

ಉಡುಪಿ| ಕಳೆದ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಅಧಿಕ ಮಳೆ

ಉಡುಪಿ: ಕಳೆದ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಅಧಿಕ ಮಳೆ ಸುರಿದಿದೆ. ಅಲ್ಲದೇ ವ್ಯಾಪಕ ಹಾನಿ ಸಂಭವಿಸಿ, ಒಟ್ಟು 6.57 ಲಕ್ಷ ರೂ. ನಷ್ಟ ಉಂಟಾಗಿದೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಮುಕ್ತಾಯಗೊಂಡ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 10.5 ಮಿ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ 2.9 ಮಿ.ಮೀ. ಮಳೆಯಾಗಬೇಕು. ಉಡುಪಿ ತಾಲೂಕಿನಲ್ಲಿ ಗರಿಷ್ಠ 24.2 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ ಕನಿಷ್ಠ 1.8 ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 11.4 ಮಿ.ಮೀ. ಮಳೆ ಬಿದ್ದಿದೆ. ಜಿಲ್ಲೆಯ ಉಳಿಯಾರಗೋಳಿ ಗ್ರಾಮದಲ್ಲಿ ಗರಿಷ್ಠ 90 ಮಿ.ಮೀ. ಮಳೆ ದಾಖಲಾಗಿದೆ. ಇನ್ನಂಜೆ ಗ್ರಾಮದಲ್ಲಿ 81 ಮಿ.ಮೀ., ಪೆರ್ಡೂರು ಗ್ರಾಮದಲ್ಲಿ 68 ಮಿ.ಮೀ., ಕಾಪುವಿನಲ್ಲಿ 60 ಮಿ.ಮೀ., ಮುಂಡ್ಕೂರು ಗ್ರಾಮದಲ್ಲಿ 56 ಮಿ.ಮೀ., ಮಜೂರು ಗ್ರಾಮದಲ್ಲಿ 54 ಮಿ.ಮೀ., ಬೆಳಪು ಗ್ರಾಮದಲ್ಲಿ 52 ಮಿ.ಮೀ., ಹೆಗ್ಗುಂಜೆಯಲ್ಲಿ 50 ಮಿ.ಮೀ. ಮಳೆ ಬಿದ್ದಿದೆ. ಕಳ್ತೂರು, ಪಳ್ಳಿ, ಕುಂಜಾಲು, ಬಡಾ, ಹೆಜಮಾಡಿ, ಕೊಕ್ಕರ್ಣೆ, ಕಡೆಕಾರು, ಮಣಿಪುರ, ಉಡುಪಿ, ಕಟಪಾಡಿ, ಕೋಟೆ, ಕುರ್ಕಾಲು, ಕುತ್ಯಾರು, ಕೊಡಿಬೆಟ್ಟು, ಮಲ್ಲಾರು, ಪಡುಬಿದ್ರಿ, ಬೀಜಾಡಿ, ಕುಂಭಾಶಿ, ಉದ್ಯಾವರ, ನೀಲಾವರ, ನಂದಳಿಕೆ, ಕಲ್ಯಾ, ಯರ್ಲಪ್ಪಾಡಿ, ಬೈಲೂರು, ಇನ್ನಾ ಮೊದಲಾದ ಗ್ರಾಮಗಳಲ್ಲಿ ಉತ್ತಮ ಮಳೆ ಸುರಿದಿದೆ. ಇನ್ನೂ ಹಲವು ಗ್ರಾಮಗಳಲ್ಲಿ ಸಾಧಾರಣದಿಂದ ಸಾಮಾನ್ಯ ಮಳೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss