Saturday, August 13, 2022

Latest Posts

ಉಡುಪಿ| ಕಾರ್ಕಳ ಪೇಟೆಯಲ್ಲಿ ಎರಡು ನಿಯಂತ್ರಿತ ವಲಯಗಳು

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಎರಡು ನಿಯಂತ್ರಿತ ವಲಯಗಳ ಘೋಷಣೆಯಾಗಿದೆ. ಸೋಂಕಿತ ಪೊಲೀಸ್ ಮತ್ತು ತುಂಬು ಗರ್ಭಿಣಿ ಇರುವ ಕಾರ್ಕಳ ಪೇಟೆಯಲ್ಲಿಯೇ ಎರಡು ನಿಯಂತ್ರಿತ ವಲಯಗಳಿವೆ.

ಕಾರ್ಕಳದಲ್ಲಿ 22ರ ಹರೆಯದ ತುಂಬು ಗರ್ಭಿಣಿ (ಪಿ-2045) ವಾಸವಿದ್ದ ಮನೆ ಸುತ್ತಮುತ್ತ ಪೂರ್ವದಲ್ಲಿ ತೆರೆದ ಜಾಗ, ಪಶ್ಚಿಮದಲ್ಲಿ ಝರಿಗುಡ್ಡ ರಸ್ತೆ, ಉತ್ತರದಲ್ಲಿ ಹೆಗ್ಡೆ ಕಂಪೌಂಡ್, ದಕ್ಷಿಣದಲ್ಲಿ ಪುರಸಭೆ ರಸ್ತೆಯನ್ನು ಗಡಿಯನ್ನಾಗಿರಿಸಲಾಗಿದೆ. ಈ ನಿಯಂತ್ರಿತ ವಲಯದಲ್ಲಿ 15 ಮನೆಗಳಿದ್ದು, 64 ಜನಸಂಖ್ಯೆ ಇದೆ.
ಈ ನಿಯಂತ್ರಿತ ವಲಯದ ಪರಿಧಿಯಿಂದ 200 ಮೀ. ಸುತ್ತಮುತ್ತ ಬಫರ್ ಝೋನ್ ಘೋಷಣೆಯಾಗಿದೆ. ಇಲ್ಲಿ ಪೂರ್ವಕ್ಕೆ ಕಾರ್ಪೊರೇಶನ್ ಬ್ಯಾಂಕ್ ರಸ್ತೆ, ಪಶ್ಚಿಮಕ್ಕೆ ಪುರಾಣಿಕ್ ರಸ್ತೆ, ಉತ್ತರಕ್ಕೆ ಝರಿಗುಡ್ಡ ರಸ್ತೆ ಮತ್ತು ದಕ್ಷಿಣಕ್ಕೆ ಹವಾಲ್ದಾರ್‌ಬೆಟ್ಟು ರಸ್ತೆಯನ್ನು ಗಡಿಯನ್ನಾಗಿರಿಸಲಾಗಿದೆ. ಈ ವಲಯದಲ್ಲಿ 256 ಮನೆಗಳಿದ್ದು, 1280 ಜನರಿದ್ದಾರೆ. ಅಲ್ಲದೇ 40 ಅಂಗಡಿಗಳು ಈ ವಲಯದಲ್ಲಿವೆ.

ಕಾರ್ಕಳದ 29ರ ಹರೆಯದ ಸೋಂಕಿತ (ಪಿ-2051) ಪೊಲೀಸ್ ಸಿಬ್ಬಂದಿ ವಾಸವಿದ್ದ ಪೊಲೀಸ್ ವಸತಿಗೃಹದ ಸುತ್ತಮುತ್ತ ಪೂರ್ವದಲ್ಲಿ ತೆರೆದ ಜಾಗ, ಪಶ್ಚಿಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ, ಉತ್ತರದಲ್ಲಿ ಶೆಣೈ ಹೌಸ್ ಮತ್ತು ದಕ್ಷಿಣದಲ್ಲಿ ಪ್ರಾಪರ್ಟಿ ರಸ್ತೆಯನ್ನು ಗಡಿಯನ್ನಾಗಿ ನಿಗದಿಸಲಾಗಿದೆ. ಈ ನಿಯಂತ್ರಿತ ವಲಯದಲ್ಲಿ 38 ಮನೆಗಳಿದ್ದು, 152 ಜನ ವಾಸವಿದ್ದಾರೆ. ಅಲ್ಲದೇ 17 ಅಂಗಡಿಗಳಿವೆ.
ಈ ನಿಯಂತ್ರಿತ ವಲಯದ ಪರಿಧಿಯಿಂದ 200 ಮೀ. ಸುತ್ತಮುತ್ತ ಬಫರ್ ಝೋನ್ ಘೋಷಣೆಯಾಗಿದೆ. ಇಲ್ಲಿ ಪೂರ್ವದಲ್ಲಿ ಮಾರುತಿ ಗ್ಯಾಸ್ ರಸ್ತೆ, ಪಶ್ಚಿಮದಲ್ಲಿ ಎಸ್‌ವಿಟಿ ರಸ್ತೆ, ಉತ್ತರದಲ್ಲಿ ಪೆರ್ವಾಜೆ ರಸ್ತೆ ಮತ್ತು ದಕ್ಷಿಣದಲ್ಲಿ ಎಚ್‌ವಿಟಿ ಸರ್ಕಲ್ ರಸ್ತೆಯನ್ನು ಗಡಿಯನ್ನಾಗಿರಿಸಲಾಗಿದೆ. ಈ ವಲಯದಲ್ಲಿ 235 ಮನೆಗಳಿದ್ದು, 1175 ಜನರಿದ್ದಾರೆ. ಇದೇ ವ್ಯಾಪ್ತಿಯಲ್ಲಿ 59 ಅಂಗಡಿಗಳು ಮತ್ತು ಒಂದು ಕಚೇರಿ ಇದೆ.

ಕಾರ್ಕಳ ನಿಯಂತ್ರಿತ ವಲಯಗಳ ಇನ್ಸಿಡೆಂಟ್ ಕಮಾಂಡರ್ ಆಗಿ ಕುಂದಾಪುರದ ಉಪವಿಭಾಗಾಧಿಕಾರಿ ಕೆ. ರಾಜು ಅವರನ್ನು ನಿಯೋಜಿಸಲಾಗಿದೆ. ಅವರು ಇಡೀ ವಲಯದ ಉಸ್ತುವಾರಿ ನೋಡಿಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss