ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಡುಪಿ| ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳ ಬಂಧನ

ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಗೇರುಬೀಜ ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಎರಡೇ ದಿನಗಳಲ್ಲಿ ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮ ಮೊಟ್ಟೆತಡ್ಕ ನಿವಾಸಿ ಸೈಯದ್ ಮೊಹಮದ್ ಬಶೀರ್ (37), ಬಂಟ್ವಾಳ ತಾಲೂಕಿನ ಮಿತ್ತೂರು ಕೆದಿಲ ಗ್ರಾಮ ನಿವಾಸಿ ಉಮ್ಮರ್ ಫಾರೂಕ್ (36) ಬಂಧಿತ ಆರೋಪಿಗಳಾಗಿದ್ದಾರೆ.
ಇಬ್ಬರು ಆರೋಪಿಗಳು ಅ. 26ರಂದು ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚೇರ್ಕಾಡಿ ಗ್ರಾಮದ ಮುಂಡ್ಕಿನ್ಜೆಡ್ಡು ಎಂಬಲ್ಲಿ ವಿಜಯದುರ್ಗಾ ಎಂಬ ಗೇರು ಬೀಜ ಕಾರ್ಖಾನೆಯ ಶಟರ್ ಅನ್ನು ಬಲವಂತವಾಗಿ ತೆರೆದು, ಗೇರು ಬೀಜ ಸಂಗ್ರಹಿಸಿಟ್ಟಿದ್ದ ಸ್ಟಾಕ್ ರೂಮ್‌ನಲ್ಲಿರುವ ತಲಾ 10 ಕೆ.ಜಿ. ತೂಕದ ಗೇರು ಬೀಜವಿರುವ ಒಟ್ಟು 32 ಡಬ್ಬಗಳನ್ನು ಕಳವು ಮಾಡಿದ್ದರು. ಇದರ ಅಂದಾಜು ಮೌಲ್ಯ 1.40 ಲಕ್ಷ ರೂ. ಆಗಿತ್ತು. ಅಲ್ಲದೇ ಅದೇ ದಿನ ಹೊಸೂರು ಗ್ರಾಮದ ಕೆಳ ಕರ್ಜೆಯಲ್ಲಿರುವ ವಿನಾಯಕ ಕ್ಯಾಶೂ ಗೇರು ಬೀಜದ ಕಾರ್ಖಾನೆಯ ಸೈಡಿನ ಬಾಗಿಲನ್ನು ಬಲತ್ಕಾರದಿಂದ ಮೀಟಿ ಮೇಲೆತ್ತಿ, ಒಳಗಿನ ಬಾಗಿಲು ಹಾಗೂ ಶಟರ್ ಅನ್ನು ಮೇಲೆತ್ತಲು ಯತ್ನಿಸಿದ್ದರು. ಈ ಬಗ್ಗೆ ದೂರುಗಳು ದಾಖಲಾಗಿದ್ದವು.
ಬ್ರಹ್ಮಾವರ ಮಾತ್ರವಲ್ಲದೇ ಜಿಲ್ಲೆಯ ಹೆಬ್ರಿ ಮತ್ತು ಅಜೆಕಾರು ಪೊಲೀಸ್ ಠಾಣೆಗಳಲ್ಲಿಯೂ ಇದೇ ಮಾದರಿಯ ಇದೇ ಮಾದರಿಯ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಆದ್ದರಿಂದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಉಡುಪಿ ಎಸ್ಪಿ ವಿಷ್ಣುವರ್ಧನ್, ಎಎಸ್ಪಿ ಕುಮಾರಚಂದ್ರ ಅವರು ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ. ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡವು ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬುಧವಾರ ಬಂಧಿಸಿದ್ದಾರೆ.
ಬಂಧಿತರಿಂದ ಈಗಾಗಲೇ ಕೃತ್ಯಕ್ಕೆ ಮತ್ತು ಪರಾರಿಯಾಗಲು ಉಪಯೋಗಿಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಅಂದಾಜು ಮೌಲ್ಯ 4ಲಕ್ಷ ರೂ., ಕಳವು ಮಾಡಿದ 32 ಡಬ್ಬ ಗೇರು ಬೀಜ ಹಾಗೂ ಆರೋಪಿಗಳಲ್ಲಿದ್ದ 3 ಮೊಬೈಲ್ ಪೋನ್‌ಗಳ ಸಹಿತ ಒಟ್ಟು 5.52 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳ ಮೇಲೆ ಹೆಬ್ರಿ, ಅಜೆಕಾರು ಠಾಣೆಗಳಲ್ಲಿಯೂ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಠಾಣಾ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ. ಅವರೊಂದಿಗೆ ಸಿಬ್ಬಂದಿ ಎಎಸೈ ಶಾಂತರಾಜ್, ಎಎಸೈ ಗೋಪಾಲ ಪೂಜಾರಿ, ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ, ರಾಘವೇಂದ್ರ ಕಾರ್ಕಡ, ಸಂತೋಷ್ ಶೆಟ್ಟಿ, ಗಣೇಶ ದೇವಾಡಿಗ, ದಿಲೀಪ್ ಕುಮಾರ, ಚಾಲಕ ಅಣ್ಣಪ್ಪ ಭಾಗಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss