ಉಡುಪಿ: ಜಿಲ್ಲೆಯ ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕರ ಕಚೇರಿಯ ಸಿಬ್ಬಂದಿ ಸಹಿತ ಮೂವರು ಪೊಲೀಸರಿಗೆ ಕೋವಿಡ್- 19 ಸೋಂಕು ದೃಢಪಟ್ಟಿದೆ.
ಎಎಸ್ಪಿ ಕಚೇರಿಯ ಸಿಬ್ಬಂದಿ ಹಾಗೂ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಇಬ್ಬರು ಪೊಲೀಸರಿಗೂ ಸೋಂಕು ಖಚಿತವಾಗಿದೆ. ಹೈವೇ ಪಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಚಾಲಕ ಸೋಂಕಿತರಾಗಿದ್ದಾರೆ. ಸೋಂಕು ದೃಢಗೊಂಡ ಎಎಸ್ಪಿ ಕಚೇರಿ ಸಿಬ್ಬಂದಿ ಜು. 2ರಿಂದ ಗೃಹ ದಿಗ್ಬಂಧನದಲ್ಲಿದ್ದರು. ಸಂಚಾರ ಠಾಣೆ ಎಎಸ್ಐ ಹಾಗೂ ಸಿಬ್ಬಂದಿ ಜು. 5ರಿಂದ ದಿಗ್ಬಂನದಲ್ಲಿದ್ದರು.
ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಎಸ್ಪಿ ಕಚೇರಿಯನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಪೂರ್ತಿ ಸ್ಯಾನಿಟೈಸ್ ಮಾಡಿದ ಬಳಿಕ 48 ತಾಸುಗಳ ಕಾಲ ಬಿಟ್ಟು ಮತ್ತೆ ತೆರೆಯಲಾಗುತ್ತದೆ. ಅಲ್ಲಿಯವರೆಗೆ ಎಎಸ್ಪಿ ಕಚೇರಿಯನ್ನು ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ಸ್ಥಳಾಂತರ ಮಾಡಲಾಗಿದೆ.