Tuesday, September 22, 2020
Tuesday, September 22, 2020

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ಉಡುಪಿ | ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ‘ಉಡುಪಿ ಸೀರೆ’ ಬ್ರ್ಯಾಂಡ್ : ಕಶೆ ಸೀರೆಗೂ ಬಂತು ಡಿಮ್ಯಾಂಡ್

sharing is caring...!

ಉಡುಪಿ: ಸ್ಥಳೀಯವಾಗಿ ‘ಯಕ್ಷಗಾನದ ಸೀರೆ’ ಎಂದೇ ಬ್ರ್ಯಾಂಡ್ ಆಗಿರುವ ಉಡುಪಿ ಕಶೆ ಸೀರೆಗೂ ಬಂತು ಡಿಮ್ಯಾಂಡ್. ರಜತಾದ್ರಿಯಲ್ಲಿ ಆಯೋಜಿಸಿದ್ದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ಥಳೀಯರು ಕೂಡ ಒಪ್ಪ ಓರಣವಾಗಿರುವ ಕಶೆ ಸೀರೆಯನ್ನು ಖರೀದಿಸಿದ್ದಾರೆ!

ಉಡುಪಿಯ ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘವು ಕಶೆ ಸೀರೆಗಳನ್ನು ತಯಾರಿಸುತ್ತಿದೆ. ಕಶೆ ಸೀರೆಯನ್ನು ಸ್ಥಳೀಯವಾಗಿ ಕೇವಲ ಯಕ್ಷಗಾನಕ್ಕೆ ಮಾತ್ರ ಬಳಸುತ್ತಿದ್ದರಿಂದ ಅದನ್ನು 8.25 ಮೀಟರ್ ಉದ್ದ ನೇಯಲಾಗುತ್ತಿತ್ತು. ಪ್ರಸ್ತುತ ಯಕ್ಷಗಾನದಲ್ಲೂ ಕಶೆ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಹಾಗಾಗಿ ಸಂಘದ ಸದಸ್ಯರು ನೇಯುವುದನ್ನು ಕಡಿಮೆ ಮಾಡಿದ್ದರು. ಕಳೆದ ಡಿಸೆಂಬರ್‌ನಿಂದ ಮಹಿಳೆಯರು ಉಡುವ 5.5 ಮೀಟರ್ ಉದ್ದದ, ಸೆರಗು ಹೊಂದಿರುವ ಕಶೆ ಸೀರೆಯನ್ನು ನೇಕಾರರು ನೇಯುತ್ತಿದ್ದು, ಏಪ್ರಿಲ್‌ನಿಂದ ಮಾರ್ಕೆಟಿಂಗ್ ಕೂಡ ಮಾಡಲಾಗುತ್ತಿದೆ. ಈವರೆಗೆ 150 ಸೀರೆಗಳನ್ನು ತಯಾರಿಸಿದ್ದು, ದೂರದೂರುಗಳಿಂದ ಆನ್‌ಲೈನ್ ಮೂಲಕ ಖರೀದಿಸುತ್ತಿದ್ದಾರೆ. ಆದರೆ ಸ್ಥಳೀಯವಾಗಿ ಖರೀದಿ ಕಡಿಮೆಯಾಗಿತ್ತು.

15 ಸೀರೆ ಖರೀದಿ, 50ಸೀರೆ ಬೇಡಿಕೆ: ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ಮೇಳದಲ್ಲಿ ಸ್ಥಳೀಯ ಮಹಿಳೆರು ಕೂಡ ಸೀರೆಯನ್ನು ಖರೀದಿಸಿದ್ದಾರೆ. ಈ ಮೇಳದಲ್ಲಿ 15 ಕಶೆ ಸೀರೆಗಳ ಮಾರಾಟವಾಗಿದ್ದು, 15ಸಾವಿರ ರೂ. ಆದಾಯ ಬಂದಿದೆ. ಮಾತ್ರವಲ್ಲ ಸಹಕಾರ ಸಂಘದವರಿಗೆ 50 ಕಶೆ ಸೀರೆಗಳಿಗೆ ಆರ್ಡರ್ ನೀಡಲಾಗಿದೆ. ಸ್ಥಳೀಯವಾಗಿ ಈ ಸೀರೆಗೆ ಹೆಚ್ಚು ಒಲವಿಲ್ಲ. ಇದು ಯಕ್ಷಗಾನದ ಸೀರೆ ಎಂದೇ ಹೇಳುತ್ತಾರೆ. ಇದೀಗ ನಿಧಾನವಾಗಿ ಪ್ರಸಿದ್ಧಿ ಪಡೆಯುತ್ತಿರುವುದು ಖುಷಿ ಕೊಟ್ಟಿದೆ. ಶೇ. 20 ವಿನಾಯಿತಿಯೊಂದಿಗೆ ಒಂದು ಸೀರೆಗೆ 850 ರೂ. ಮಾರಾಟ ಮಾಡಲಾಗುತ್ತಿದೆ ಎಂದು ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಶಶಿಕಾಂತ್ ಅವರು ’ಹೊಸ ದಿಗಂತ’ಕ್ಕೆ ತಿಳಿಸಿದ್ದಾರೆ.

ಲಕ್ಷಕ್ಕೂ ಅಧಿಕ ಮೌಲ್ಯದ ವಹಿವಾಟು: ಉಡುಪಿ ಜಿ.ಪಂ.ನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ವಿಶೇಷ ಮುತುವರ್ಜಿಯಿಂದ ಆಯೋಜನೆಗೊಂಡ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಲಕ್ಷಕ್ಕೂ ಅಧಿಕ ಮೌಲ್ಯದ ವಹಿವಾಟು ನಡೆದಿದೆ. ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ 45ಸಾವಿರ ರೂ. ಮೌಲ್ಯದ 50 ‘ಉಡುಪಿ ಸೀರೆ’ಗಳು, ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ 15ಸಾವಿರ ರೂ. ಮೌಲ್ಯದ 15 ಕಶೆ ಸೀರೆಗಳು, ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘದ 10ಸಾವಿರ ರೂ. ಮೌಲ್ಯದ ಲುಂಗಿ, ಬೈರಾಸುಗಳು ಹಾಗೂ ಕಿನ್ನಿಗೋಳಿ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಂಘದ 40ಸಾವಿರ ರೂ. ಮೌಲ್ಯದ 34 ‘ಉಡುಪಿ ಸೀರೆ’ಗಳು ಮಾರಾಟವಾಗಿವೆ. ಮೇಳದಲ್ಲಿ 850ರಿಂದ 1400 ರೂ. ದರದ ಉಡುಪಿ ಸೀರೆಗಳಿದ್ದವು. ಒಟ್ಟು 99 ಸೀರೆಗಳು ಮಾರಾಟವಾದರೆ, ಅದರಲ್ಲಿ 84 ಉಡುಪಿ ಬ್ರ್ಯಾಂಡ್ ಸೀರೆಗಳಾಗಿವೆ.

ಒಂದೇ ದಿನ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದ್ದರೂ ಉತ್ತಮ ಸ್ಪಂದನೆ ಲಭಿಸಿದೆ. ಸುಮಾರು 2000ಕ್ಕೂ ಅಧಿಕ ಜನರು ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಸರಕಾರಿ ಕಚೇರಿಗಳ ಸಿಬ್ಬಂದಿ ಸಹಿತ ಸಾರ್ವಜನಿಕರು ಭೇಟಿ ನೀಡಿ ವಿವಿಧ ಸೀರೆಗಳು ಹಾಗೂ ಉಡುಪುಗಳನ್ನು ವೀಕ್ಷಿಸಿದ್ದಾರೆ, ಅಲ್ಲದೇ ಖರೀದಿಸಿದ್ದಾರೆ.

ದಸರಾದಲ್ಲಿ ಪ್ರದರ್ಶನಕ್ಕೆ ಅವಕಾಶಬೇಕು: ಕೈಮಗ್ಗ ಇಲಾಖೆಯಿಂದ ಉಡುಪಿ ಸೀರೆಗಳ ಬಗ್ಗೆ ಪ್ರಚಾರ ಮಾಡಬೇಕೆಂದು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯಿಂದ ಈ ಪ್ರದರ್ಶನ ಆಯೋಜನೆ ಮಾಡಿತ್ತು. ಸೀರೆಗಳ ಉತ್ಪಾದನೆ, ಬಳಕೆಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ ನೀಡುವ ನಿಟ್ಟಿನಲ್ಲಿ, ಮೈಸೂರು ದಸರಾ ಸೇರಿದಂತೆ ವಿವಿಧೆಡೆಗಳಲ್ಲಿ ಇಲಾಖೆಗಳು ಆಯೋಜಿಸುವ ವಸ್ತುಪ್ರದರ್ಶನದಲ್ಲಿ ಉಡುಪಿ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲು ಜಿ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಲಾಗಿದೆ. ನಮ್ಮ ಹೆಚ್ಚಿನ ಸದಸ್ಯರು ಸೀರೆಯನ್ನು ಖರೀದಿಸಿದ್ದಾರೆ.
– ರೇಶ್ಮಾ ಉದಯ ಶೆಟ್ಟಿ, ಜಿ.ಪಂ. ಸದಸ್ಯರು

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ಸಹಜ ಸ್ಥಿತಿಗೆ ಮರಳಿದ ಉಡುಪಿ ಜಿಲ್ಲೆ: ಮೋಡ-ಬಿಸಿಲ ಜುಗಲ್ ಬಂದಿ!

ಉಡುಪಿ: ಎರಡು ದಿನಗಳ ಕಾಲ ರೆಡ್ ಅಲರ್ಟ್ ಇದ್ದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಬೆಳಗ್ಗೆ ಮತ್ತು ಸಂಜೆಯ ವೇಳೆ ರಭಸದಿಂದ ಕೂಡಿದ ಮಳೆಯಾಗಿದ್ದರೂ ದಿನ ಉಳಿದ ಸಮಯ...

Don't Miss

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...
error: Content is protected !!