Latest Posts

ಯಾವುದೇ ಕ್ಷಣದಲ್ಲಿ ಕಬಿನಿ ಜಲಾಶಯ ಭರ್ತಿ: ಸುರಕ್ಷಿತ ಸ್ಥಳಕ್ಕೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಮೈಸೂರು : ಮೈಸೂರು ಜಿಲ್ಲೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಲಿದ್ದು, ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುವ ಕಾರಣ ನದಿ ಪಾತ್ರದಲ್ಲಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ...

ಕೊಪ್ಪಳ: ಬೆಡ್ ನೀಡಲು ಒಪ್ಪಿದ ಗಂಗಾವತಿ ಖಾಸಗಿ ಆಸ್ಪತ್ರೆಗಳು

ಕೊಪ್ಪಳ: ಕೋವಿಡ್​ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ...

ಬಿದ್ದ ಗಾಯ ನಿಧಾನವಾಗಿ ವಾಸಿಯಾಗುತ್ತಿದೆಯೇ? ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ವೃದ್ಧಿಗೆ ಈ ಆಹಾರ ಸೇವಿಸಿ..

ಎಲ್ಲಾದರೂ ಬಿದ್ದು ಗಾಯಮಾಡಿಕೊಂಡಾಗ ಗಾಯ ಅದಾಗೆ ವಾಸಿ ಆಗುತ್ತದೆ. ರಕ್ತದ ಕ್ಲಾಟ್ ಉಂಟಾಗಿ ರಕ್ತ ಬರುವುದು ನಿಲ್ಲುತ್ತದೆ. ನೀವು ಆರಾಮಾಗುತ್ತೀರಿ. ಅದೇ ನಿಮ್ಮ ಗಾಯ ವಾಸಿಯೇ ಆಗಲಿಲ್ಲ ಎಂದರೆ? ಬ್ಲಡ್ ಕ್ಲಾಟ್ ಆಗಲೇ...

ಉಡುಪಿ| ಕೊರೋನಾ ನಡುವೆ ಕೃಷಿಕರಿಗೆ ಸಂತಸ ತಂದ ಮುಂಗಾರು ಮಳೆ: ಭತ್ತದ ಬೇಸಾಯ ಶೇ. 27.22 ರಷ್ಟು ಗುರಿ

sharing is caring...!

ಉಡುಪಿ: ಕೋವಿಡ್-19 ಸೋಂಕು ಎಲ್ಲೆಡೆ, ಎಲ್ಲರಿಗೂ ಸಂಕಷ್ಟವನ್ನೇ ತಂದೊಡ್ಡಿದ್ದರೂ ಕೃಷಿ ಕ್ಷೇತ್ರಕ್ಕೆ ಮಾತ್ರ ಒಳ್ಳೆಯದೇ ಮಾಡಿದೆ. ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ಉಡುಪಿಗೆ ಆಗಮಿಸಿದ ಬಹುತೇಕ ಜನರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜೂನ್ ಅಂತ್ಯಕ್ಕೆ ಭತ್ತದ ಬೇಸಾಯ ಶೇ. 27.22 ರಷ್ಟು ಗುರಿ ಸಾಧನೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಖಾರಿಫ್ ಬೆಳೆ ಒಟ್ಟು 36,000 ಹೆಕ್ಟೇರು ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ. ಜೂನ್ ಅಂತ್ಯದ ವೇಳೆ ಇಡೀ ಜಿಲ್ಲೆಯಲ್ಲಿ 9800 ಹೆ. ಪ್ರದೇಶದಲ್ಲಿ ನಾಟಿ ಮತ್ತು ಬಿತ್ತನೆ ಕಾರ್ಯ ನಡೆದಿದೆ. ಈ ಬಾರಿ ಮೇ ತಿಂಗಳ ಮುಂಗಾರು ಪೂರ್ವ ಮಳೆಯೂ ಚೆನ್ನಾಗಿ ಸುರಿದಿದೆ. ಜೂನ್ ಮೊದಲೆರಡು ವಾರದಲ್ಲಿಯೂ ಕೃಷಿಕ ಪೂರಕ ವಾತಾವರಣವಿತ್ತು. ತಿಂಗಳಾಂತ್ಯಕ್ಕೆ ಉತ್ತಮ ಪ್ರಗತಿಯಾಗಿದೆ.

ಕಳೆದ ವರ್ಷಕ್ಕಿಂತ 7ಪಟ್ಟು ಅಧಿಕ ಸಾಧನೆ: ಜಿಲ್ಲೆಯಲ್ಲಿ ಕಳೆದ ವರ್ಷವೂ 36,000 ಹೆ. ಪ್ರದೇಶದಲ್ಲಿ ಬಿತ್ತನೆ ಗುರಿ ಇರಿಸಿದ್ದು, ಜೂನ್ ತಿಂಗಳಾಂತ್ಯಕ್ಕೆ ಕೇವಲ 1,507 ಹೆ. ಪ್ರದೇಶ ಬಿತ್ತನೆ ನಾಟಿಯಾಗಿತ್ತು. ಅಂದರೆ ಕಳೆದ ಸಾಲಿನಲ್ಲಿ ಶೇ. 4.18ರಷ್ಟು ಗುರಿ ಸಾಧನೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಣನೀಯ ಹೆಚ್ಚಳವಾಗಿದ್ದು, 7ಪಟ್ಟು ಜಾಸ್ತಿ ಪ್ರದೇಶದಲ್ಲಿ ಬೇಸಾಯ ಕಾರ್ಯ ನಡೆದಿದೆ. ಅತಿವೃಷ್ಠಿಯಾದ 2018ರ ಜೂನ್‌ಗೆ ಹೋಲಿಸಿದಾಗ 2ಪಟ್ಟು ಹೆಚ್ಚು ಪ್ರಗತಿ ತೋರಿಸುತ್ತಿದೆ. ಪ್ರಸಕ್ತ ಕೃಷಿ ಚಟುವಟಿಕೆಗಳು ಇನ್ನಷ್ಟು ಚುರುಕು ಪಡೆದಿವೆ.

ಉಡುಪಿ ತಾಲೂಕಿನಲ್ಲಿ ಗರಿಷ್ಠ 4900 ಹೆ:  ತಾಲೂಕುವಾರು ಬಿತ್ತನೆ ಪ್ರದೇಶದ ಪ್ರಗತಿಯನ್ನು ಗಮನಿಸಿದರೆ ಉಡುಪಿ ತಾಲೂಕಿನಲ್ಲಿ ಗರಿಷ್ಠ ಬಿತ್ತನೆ ನಡೆದಿದೆ. ಉಡುಪಿ ತಾಲೂಕಿನಲ್ಲಿ 15,500 ಹೆ. ಪ್ರದೇಶದ ಗುರಿ ಇರಿಸಿದ್ದು, ಈ ಅವಧಿಯಲ್ಲಿ 4900 ಹೆ. ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಉಡುಪಿಯಲ್ಲಿ ಕಳೆದ ವರ್ಷಕ್ಕಿಂತ ನಾಲ್ಕು ಪಟ್ಟು ಅಧಿಕ ಎಂದರೆ ಶೇ. 31.61ರಷ್ಟು ಸಾಧನೆಯಾಗಿದೆ.

ಕುಂದಾಪುರ ತಾಲೂಕಿನಲ್ಲಿ ನಿಗದಿಪಡಿಸಲಾಗಿದ್ದ 14,000 ಹೆ. ಪ್ರದೇಶದಲ್ಲಿ 4230 ಹೆ. ಪ್ರದೇಶದಲ್ಲಿ ಬಿತ್ತನೆ ಮತ್ತು ನಾಟಿ ಕಾರ್ಯ ಪೂರ್ಣಗೊಂಡಿದೆ. ಕಾರ್ಕಳ ತಾಲೂಕಿನಲ್ಲಿ 6,500 ಹೆ. ಪ್ರದೇಶದಲ್ಲಿ ಭತ್ತದ ಕೃಷಿ ನಡೆಯಬೇಕಿದ್ದು, 670 ಹೆ. ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಕುಂದಾಪುರದಲ್ಲಿ ಶೇ. 30.21ಅಂದರೆ ಸುಮಾರು 20ಪಟ್ಟು ಮತ್ತು ಕಾರ್ಕಳದಲ್ಲಿ ಶೇ. 10.30ರಷ್ಟು ಎಂದರೆ 10ಪಟ್ಟು ಕಳೆದ ವರ್ಷಕ್ಕಿಂತ ಜಾಸ್ತಿ ಪ್ರದೇಶದಲ್ಲಿ ಈಗಾಗಲೇ ಬೇಸಾಯ ನಡೆದಿದೆ.

ಹೆಚ್ಚುವರಿ ಸಾಧನೆಗೆ ಕೋವಿಡ್-19 ಕಾರಣ!
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ. 27ರಷ್ಟು ಬಿತ್ತನೆ ಪ್ರಗತಿ ಸಾಧನೆಗೆ ಕೋವಿಡ್-19 ಕೂಡ ಕಾರಣ. ಪ್ರಮುಖವಾಗಿ ಮುಂಗಾರು ಹಾಗೂ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದರಿಂದ ಸಕಾಲದಲ್ಲಿ ಕೃಷಿಕರು ಬೇಸಾಯ ಚಟುವಟಿಕೆ ಆರಂಭಿಸಲು ಅನುಕೂಲವಾಗಿದೆ. ಅದರ ಜೊತೆಯಲ್ಲಿ ಹೊರಗಿನಿಂದ ಬಂದು ಊರಲ್ಲೇ ಇರುವವರು, ಉದ್ಯೋಗ ಕಳೆದುಕೊಂಡವರು ಮತ್ತೆ ಕೈಗೆ ಕೆಸರು ಮಾಡಿಕೊಂಡಿದ್ದಾರೆ. ಕೃಷಿ ಕ್ಷೇತ್ರದತ್ತ ಆಸಕ್ತಿ ತೋರಿಸಿ, ಹಡೀಲು ಬಿಟ್ಟಿದ್ದ ಗದ್ದೆಗಳಲ್ಲಿಯೂ ಬೇಸಾಯ ಮಾಡುತ್ತಿದ್ದಾರೆ. ಪರಿಣಾಮ ಕೃಷಿ ಇಲಾಖೆ ಮುಂಗಾರು ಹಂಗಾಮಿನ ಖಾರಿಫ್ ಬೆಳೆಗೆ ಇರಿಸಿಕೊಂಡಿದ್ದ ಭೌತಿಕ ಗುರಿಗಿಂತ ಜಾಸ್ತಿ ಪ್ರದೇಶದಲ್ಲಿ ಬೇಸಾಯ ನಡೆಯುವ ಎಲ್ಲ ಸೂಚನೆಗಳು ಗೋಚರಿಸುತ್ತಿವೆ.

ಈ ವರ್ಷ ಗುರಿ ಮೀರಿದ ಸಾಧನೆಯ ನಿರೀಕ್ಷೆ: ಈ ಬಾರಿ ಮಳೆ ಚೆನ್ನಾಗಿ ಆಗಿದ್ದರಿಂದ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಗದ್ದೆ ಹದ ಮಾಡುವುದು, ಬಿತ್ತುವುದು, ನೇಜಿ, ನಾಟಿಯ ಕೆಲಸ ನಡೆಯುತ್ತಿದೆ. ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಧಿಕ ಗುರಿ ಸಾಧನೆಯಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿದವರು ಕೃಷಿಯತ್ತ ಆಸಕ್ತಿ ತೋರಿಸಿ, ಬೇಸಾಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಬಾರಿ ಗುರಿ ಮೀರಿ ಸಾಧನೆಯಾಗುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕ್‌ ತಿಳಿಸಿದ್ದಾರೆ.

Latest Posts

ಯಾವುದೇ ಕ್ಷಣದಲ್ಲಿ ಕಬಿನಿ ಜಲಾಶಯ ಭರ್ತಿ: ಸುರಕ್ಷಿತ ಸ್ಥಳಕ್ಕೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಮೈಸೂರು : ಮೈಸೂರು ಜಿಲ್ಲೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಲಿದ್ದು, ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುವ ಕಾರಣ ನದಿ ಪಾತ್ರದಲ್ಲಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ...

ಕೊಪ್ಪಳ: ಬೆಡ್ ನೀಡಲು ಒಪ್ಪಿದ ಗಂಗಾವತಿ ಖಾಸಗಿ ಆಸ್ಪತ್ರೆಗಳು

ಕೊಪ್ಪಳ: ಕೋವಿಡ್​ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ...

ಬಿದ್ದ ಗಾಯ ನಿಧಾನವಾಗಿ ವಾಸಿಯಾಗುತ್ತಿದೆಯೇ? ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ವೃದ್ಧಿಗೆ ಈ ಆಹಾರ ಸೇವಿಸಿ..

ಎಲ್ಲಾದರೂ ಬಿದ್ದು ಗಾಯಮಾಡಿಕೊಂಡಾಗ ಗಾಯ ಅದಾಗೆ ವಾಸಿ ಆಗುತ್ತದೆ. ರಕ್ತದ ಕ್ಲಾಟ್ ಉಂಟಾಗಿ ರಕ್ತ ಬರುವುದು ನಿಲ್ಲುತ್ತದೆ. ನೀವು ಆರಾಮಾಗುತ್ತೀರಿ. ಅದೇ ನಿಮ್ಮ ಗಾಯ ವಾಸಿಯೇ ಆಗಲಿಲ್ಲ ಎಂದರೆ? ಬ್ಲಡ್ ಕ್ಲಾಟ್ ಆಗಲೇ...

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

Don't Miss

ಯಾವುದೇ ಕ್ಷಣದಲ್ಲಿ ಕಬಿನಿ ಜಲಾಶಯ ಭರ್ತಿ: ಸುರಕ್ಷಿತ ಸ್ಥಳಕ್ಕೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಮೈಸೂರು : ಮೈಸೂರು ಜಿಲ್ಲೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಲಿದ್ದು, ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುವ ಕಾರಣ ನದಿ ಪಾತ್ರದಲ್ಲಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ...

ಕೊಪ್ಪಳ: ಬೆಡ್ ನೀಡಲು ಒಪ್ಪಿದ ಗಂಗಾವತಿ ಖಾಸಗಿ ಆಸ್ಪತ್ರೆಗಳು

ಕೊಪ್ಪಳ: ಕೋವಿಡ್​ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ...

ಬಿದ್ದ ಗಾಯ ನಿಧಾನವಾಗಿ ವಾಸಿಯಾಗುತ್ತಿದೆಯೇ? ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ವೃದ್ಧಿಗೆ ಈ ಆಹಾರ ಸೇವಿಸಿ..

ಎಲ್ಲಾದರೂ ಬಿದ್ದು ಗಾಯಮಾಡಿಕೊಂಡಾಗ ಗಾಯ ಅದಾಗೆ ವಾಸಿ ಆಗುತ್ತದೆ. ರಕ್ತದ ಕ್ಲಾಟ್ ಉಂಟಾಗಿ ರಕ್ತ ಬರುವುದು ನಿಲ್ಲುತ್ತದೆ. ನೀವು ಆರಾಮಾಗುತ್ತೀರಿ. ಅದೇ ನಿಮ್ಮ ಗಾಯ ವಾಸಿಯೇ ಆಗಲಿಲ್ಲ ಎಂದರೆ? ಬ್ಲಡ್ ಕ್ಲಾಟ್ ಆಗಲೇ...
error: Content is protected !!