Tuesday, June 28, 2022

Latest Posts

ಉಡುಪಿ| ಕೋವಿಡ್-19 ನಿಂದ ಬಳಲುತ್ತಿದ್ದ ನಾಲ್ವರು ಕೊರೋನಾ ವಾರಿಯರ್ಸ್ ಗುಣಮುಖ

ಉಡುಪಿ: ಕೋವಿಡ್ – 19 ಸೋಂಕಿನ ವಿರುದ್ಧ ಯೋಧರಾಗಿ ಕರ್ತವ್ಯ ನಿರ್ವಹಿಸಿದ್ದ ನಾಲ್ವರು ಕೊರೋನಾ ವಾರಿಯರ್ಸ್ ಕೂಡ ಇಂದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಪಶ್ಚಿಮ ವಲಯ ಆರಕ್ಷಕ ಮಹಾನಿರೀಕ್ಷ ದೇವಜ್ಯೋತಿ ರಾಯ್ ಅವರು ಕೋವಿಡ್ ಆಸ್ಪತ್ರೆಗೆ ಆಗಮಿಸಿ ನಾಲ್ವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಹೂಗುಚ್ಛ ನೀಡಿ ಹಾರೈಸಿದರು. ಬೇಗ ಗುಣಮುಖರಾಗಿರುವುದಕ್ಕೆ ಖುಷಿ ಇದೆ. ಅಪಾಯದ ನಡುವೆಯೇ ಕೆಲಸ ಮಾಡಿದ  ತಮ್ಮ ಬಗ್ಗೆ ಇಲಾಖೆಗೆ ಹೆಮ್ಮೆ ಇದೆ. ಮತ್ತೆ ಇಲಾಖೆಗೆ ಬಂದು ಕರ್ತವ್ಯಕ್ಕೆ ಹಾಜರಾಗಿ, ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಎಂದು ಶ್ಲಾಘಿಸಿದರು.

ಅಜೆಕಾರು, ಕಾರ್ಕಳ ನಗರ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಧಿಕಾರಿ ಅವರನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಎಎಸ್ಪಿ ಕುಮಾರಚಂದ್ರ, ಕೋವಿಡ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ಶಶಿಕಿರಣ್ ಉಮಾಕಾಂತ್ ಮೊದಲಾದವರಿದ್ದರು‌.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss