Thursday, February 25, 2021

Latest Posts

ಉಡುಪಿ| ಗೇರು ಪ್ಲಾಂಟೇಶನ್’ಗೆ ಬೆಂಕಿ: ಗಿಡ ಮರಗಳು ಬೆಂಕಿಗಾಹುತಿ

ಹೊಸದಿಗಂತ ವರದಿ, ಉಡುಪಿ:

ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಸಮೀಪ ಗೇರು ಪ್ಲಾಂಟೇಶನ್‌ಗೆ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಎಕರೆಗಟ್ಟಲೆ ಗೇರು ಪ್ಲಾಂಟೇಶನ್ ಬೆಂಕಿಯ ಕೆನ್ನಾಲಿಗೆ ತುತ್ತಾಗಿದೆ.

ತ್ರಾಸಿ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಗೇರು ಪ್ಲಾಂಟೇಶನ್‌ಗೆ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಐದಾರು ಎಕರೆಗೆ ವ್ಯಾಪಿಸಿದೆ. ಮಧ್ಯಾಹ್ನ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಗೇರು ಮರಗಳ ಸಹಿತ ಜಮೀನಿನಲ್ಲಿದ್ದ ಗಿಡ ಮರಗಳು ಸುಟ್ಟು ಕರಕಲಾಗಿವೆ.

ಈ ಪ್ರದೇಶದಲ್ಲಿ ಪ್ರತೀ ವರ್ಷ ಅಗ್ನಿ ಅವಾಂತರ ನಡೆಯುತ್ತಿದ್ದು, ನಿಖರ ಕಾರಣಗಳು ತಿಳಿದಿಲ್ಲ. ಕಿಡಿಗೇಡಿಗಳು ಈ ರೀತಿಯ ವರ್ತನೆ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸ್ಥಳದಲ್ಲಿ ಬೈಂದೂರು ಮತ್ತು ಕುಂದಾಪುರ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿಗೆ ಬೆಂಕಿ ನಂದಿಸಲು ಗಂಗೊಳ್ಳಿ ಪೊಲೀಸರು ಹಾಗೂ ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!