Sunday, November 29, 2020

Latest Posts

ಕೇರಳ ಪ್ಲಸ್ ಒನ್ ತರಗತಿ ಪ್ರವೇಶಾತಿ: ಮೆರಿಟ್ ಕೋಟಾದಡಿ ಸೇರ್ಪಡೆಗೆ ವ್ಯವಸ್ಥೆ

ಹೊಸ ದಿಗಂತ ವರದಿ ಕಾಸರಗೋಡು ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ...

ಗಡಿಯಲ್ಲಿ ಪಾಕ್ ಡ್ರೋನ್: ಬಿಎಸ್ಸೆಫ್ ಗುಂಡಿಗೆ ಅಂಜಿ ಮರಳಿ ಗೂಡಿಗೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಲಂಪಟತನ ತೋರಿಸಿದೆ. ಜಮ್ಮು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಹಾರಿಬಿಟ್ಟಿದ್ದು, ಇದರ ಮೇಲೆ ಬಿಎಸ್‌ಎಫ್...

ಸಹಕಾರಿ ಬ್ಯಾಂಕಿನ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಯಲ್ಲಿ ನಡೆಯಿತು ಸ್ವಪಕ್ಷೀಯರ ಕಿತ್ತಾಟ!

ಹೊಸ ದಿಗಂತ ವರದಿ ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಲ್ಲಿ ಸ್ವಪಕ್ಷೀಯ ನಾಯಕರ ಸ್ವಾರ್ಥ ರಾಜಕಾರಣದ ವಿರುದ್ದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ...

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಲಸಿಕೆಯ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆ

ಮಣಿಪಾಲ: ಕೋವಿಡ್-19 ಸೋಂಕಿಗೆ ಲಸಿಕೆ ಅಭಿವೃದ್ಧಿಯು ಅಂತಿಮ ಹಂತದಲ್ಲಿದ್ದು, ಕೇಂದ್ರ ಸರಕಾರದ ನಿರ್ದೇಶನದಂತೆ
ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗೆ ನೀಡಬೇಕಿದೆ.
ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಲಸಿಕೆಯ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೋವಿಡ್-19 ಲಸಿಕೆ ನೀಡಲು ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ 982 ಖಾಸಗಿ ಸಂಸ್ಥೆಗಳು ಹಾಗೂ 92 ಸರಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವೈದ್ಯರು, ಶುಶ್ರೂಶಕರು, ಲ್ಯಾಬ್ ಟೆಕ್ನೀಷಿಯನ್ ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ವಿವರಗಳನ್ನು ಸಮಗ್ರವಾಗಿ ದಾಖಲಿಸಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ ಅವರು, ನಂತರದ ಹಂತದಲ್ಲಿ ವೃದ್ಧರು ಮತ್ತು ದುರ್ಬಲ ವ್ಯಕ್ತಿಗಳಿಗೆ ಲಸಿಕೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹೇಳಿದರು.
ಜಿಲ್ಲೆಯಲ್ಲಿ ಮಕ್ಕಳಿಗೆ ನೀಡುವ ನಿಗದಿತ ಲಸಿಕೆಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸದಂತೆ ಸೂಚಿಸಿದ ಜಿಲ್ಲಾಧಿಕಾರಿ, ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಲಸಿಕೆ ನೀಡಿ, ಲಾಕ್‌ಡೌನ್ ಸಮಯದಲ್ಲಿ ಕುಂಠಿತಗೊಂಡಿರುವ ಗುರಿಯನ್ನು ಪೂರ್ಣಗೊಳಿಸಲು ನಿರ್ದೇಶಿಸಿದರು.
ಹೆರಿಗೆ ವೇಳೆ ತಾಯಿ ಮರಣವನ್ನು ತಪ್ಪಿಸಲು ಎಲ್ಲ ರೀತಿಯ ಗರಿಷ್ಠ ಪ್ರಯತ್ನ ಮಾಡಿ, ಗರ್ಭಿಣಿಯರಿಗೆ ಹೆರಿಗೆ ವೇಳೆ ಸಮಸ್ಯೆ ಕಂಡು ಬರುವ ಸಾಧ್ಯತೆಯಿದ್ದಲ್ಲಿ ಅವರ ಚಿಕಿತ್ಸೆಗೆ ಮುಂಚಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್ -19 ಪ್ರಮಾಣ ಕಡಿಮೆಯಾಗುತ್ತಿದ್ದು, ಸಾವುಗಳು ಸಹ ಕಡಿಮೆಯಾಗಿವೆ. ಸಾರ್ವಜನಿಕರು, ಕೋವಿಡ್ ಸಂಪೂರ್ಣವಾಗಿ ನಿಗ್ರಹವಾಗುವರೆಗೆ ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಧರಿಸುವುದನ್ನು ನಿತ್ಯದ ರೂಢಿಯನ್ನಾಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಎಂ.ಜಿ.ರಾಮ ಸ್ವಾಗತಿಸಿ, ವಂದಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಕೇರಳ ಪ್ಲಸ್ ಒನ್ ತರಗತಿ ಪ್ರವೇಶಾತಿ: ಮೆರಿಟ್ ಕೋಟಾದಡಿ ಸೇರ್ಪಡೆಗೆ ವ್ಯವಸ್ಥೆ

ಹೊಸ ದಿಗಂತ ವರದಿ ಕಾಸರಗೋಡು ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ...

ಗಡಿಯಲ್ಲಿ ಪಾಕ್ ಡ್ರೋನ್: ಬಿಎಸ್ಸೆಫ್ ಗುಂಡಿಗೆ ಅಂಜಿ ಮರಳಿ ಗೂಡಿಗೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಲಂಪಟತನ ತೋರಿಸಿದೆ. ಜಮ್ಮು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಹಾರಿಬಿಟ್ಟಿದ್ದು, ಇದರ ಮೇಲೆ ಬಿಎಸ್‌ಎಫ್...

ಸಹಕಾರಿ ಬ್ಯಾಂಕಿನ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಯಲ್ಲಿ ನಡೆಯಿತು ಸ್ವಪಕ್ಷೀಯರ ಕಿತ್ತಾಟ!

ಹೊಸ ದಿಗಂತ ವರದಿ ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಲ್ಲಿ ಸ್ವಪಕ್ಷೀಯ ನಾಯಕರ ಸ್ವಾರ್ಥ ರಾಜಕಾರಣದ ವಿರುದ್ದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ...

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...

Don't Miss

ಕೇರಳ ಪ್ಲಸ್ ಒನ್ ತರಗತಿ ಪ್ರವೇಶಾತಿ: ಮೆರಿಟ್ ಕೋಟಾದಡಿ ಸೇರ್ಪಡೆಗೆ ವ್ಯವಸ್ಥೆ

ಹೊಸ ದಿಗಂತ ವರದಿ ಕಾಸರಗೋಡು ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ...

ಗಡಿಯಲ್ಲಿ ಪಾಕ್ ಡ್ರೋನ್: ಬಿಎಸ್ಸೆಫ್ ಗುಂಡಿಗೆ ಅಂಜಿ ಮರಳಿ ಗೂಡಿಗೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಲಂಪಟತನ ತೋರಿಸಿದೆ. ಜಮ್ಮು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಹಾರಿಬಿಟ್ಟಿದ್ದು, ಇದರ ಮೇಲೆ ಬಿಎಸ್‌ಎಫ್...

ಸಹಕಾರಿ ಬ್ಯಾಂಕಿನ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಯಲ್ಲಿ ನಡೆಯಿತು ಸ್ವಪಕ್ಷೀಯರ ಕಿತ್ತಾಟ!

ಹೊಸ ದಿಗಂತ ವರದಿ ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಲ್ಲಿ ಸ್ವಪಕ್ಷೀಯ ನಾಯಕರ ಸ್ವಾರ್ಥ ರಾಜಕಾರಣದ ವಿರುದ್ದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ...
error: Content is protected !!