ಉಡುಪಿ: ಮತ್ತೆ ಜಿಲ್ಲೆಯಲ್ಲಿ ಕೋವಿಡ್ -19 ಮುಂಬೈ ನಂಟು ಸ್ಪೋಟಗೊಂಡಿದೆ. ಒಂದೇ ದಿನ ಜಿಲ್ಲೆಯಲ್ಲಿ 32 ಮಂದಿಗೆ ಸೋಂಕು ದೃಢಪಟ್ಟಿದೆ. ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. ಇಂದು ಸಂಜೆಯ ಪ್ರಕರಣ ಪಟ್ಟಿಯಲ್ಲಿ ಮತ್ತೆ 16 ಮಂದಿ ಸೋಂಕಿತರು ಪತ್ತೆಯಾಗಿದೆ. ಈ ಪೈಕಿ ಇಬ್ಬರು ಮಕ್ಕಳು, 10 ಪುರುಷರು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ. ಓರ್ವನಿಗೆ ನಿಯಂತ್ರಿತ ವಲಯದ ಸಂಪರ್ಕ ಹೊಂದಿದ್ದಾರೆ. ಆತಂಕದ ವಿಚಾರ ಎಂದರೆ ಶೀತಜ್ವರದ ಲಕ್ಷಣ ಇರುವ ಒಬ್ಬರಿಗೆ ವೈರಸ್ ದಾಳಿಯಾಗಿದೆ. ಉಳಿದ 14 ಮುಂಬೈ ನಂಟು ಇದೆ.
ಇಂದು ಇಡೀ ದಿನ ಜಿಲ್ಲೆಯಲ್ಲಿ 32 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 28 ಪ್ರಕರಣಗಳು ಮುಂಬೈ ನಂಟು ಹೊಂದಿವೆ. ಇಬ್ಬರು ದುಬೈನಿಂದ ಬಂದವರಾಗಿದ್ದರೆ, ಇನ್ನಿಬ್ಬರ ಸೋಂಕಿನ ಮೂಲ ನಿಗೂಢವಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 108 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 86 ಪ್ರಕರಣಗಳು ಮುಂಬೈ ಒಂದೇ ನಗರದಿಂದ ಬಂದಿವೆ.