Tuesday, August 9, 2022

Latest Posts

ಉಡುಪಿ| ಜಿಲ್ಲೆಯಲ್ಲಿ ಆರು ಜನರಿಗೆ ಸೋಂಕು ದೃಢ: ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ – 19 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಕಳೆದ ಒಂದುವರೆ ತಿಂಗಳಿನಿಂದ ಯಾವುದೇ ಕೋವಿಡ್-19 ಸೋಂಕು ಹೊಸ ಪ್ರಕರಣವಿಲ್ಲದೆ ಸುರಕ್ಷಿತ ವಲಯದಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಆರು ಜನರಿಗೆ ಸೋಂಕು ದೃಢವಾಗಿದೆ.
ಮೂರು ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಸೋಂಕಿತರಾಗಿದ್ದಾರೆ.
ದುಬೈನಿಂದ ಆಗಮಿಸಿದ ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢಪಟ್ಟಿದೆ. 37 ವರ್ಷ ಪ್ರಾಯದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದ್ದು, 33 ವರ್ಷ ಪ್ರಾಯದ ಅವರ ಪತ್ನಿ ಮತ್ತು ಒಂದು ವರ್ಷ ವಯಸ್ಸಿನ ಮಗಳಿಗೂ ಸೋಂಕು ಅಂಟಿದೆ. ಉಳಿದಂತೆ 52 ವರ್ಷ ಮತ್ತು 31 ವರ್ಷ ಪ್ರಾಯದ ಇಬ್ಬರು ಪುರುಷರು ಕೋವಿಡ್ ಸೋಂಕಿತರಾಗಿದ್ದಾರೆ. ಇನ್ನೊಬ್ಬ 38 ವರ್ಷ ಪ್ರಾಯದ ಮಹಿಳೆಯೂ ಕೋವಿಡ್ ಪಾಸಿಟಿವ್ ಆಗಿದ್ದಾರೆ ಎಂದು ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss