Monday, August 8, 2022

Latest Posts

ಉಡುಪಿ ಜಿಲ್ಲೆಯಲ್ಲಿ ಇಂದು ಮೂವರಿಗಷ್ಟೇ ಸೋಂಕು ದೃಢ: ಸೋಂಕಿತ ಮಗುವಿನ ತಂದೆಗೂ ತಗುಲಿತು ವೈರಸ್

ಉಡುಪಿ: ಜಿಲ್ಲೆಯಲ್ಲಿ ಶನಿವಾರ ಒಟ್ಟು ಮೂರು ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಪ್ರಕರಣಗಳು 53ಕ್ಕೇರಿದೆ. ಸೋಂಕಿತರೆಲ್ಲರೂ ಮುಂಬೈ ನಂಟು ಹೊಂದಿದ್ದಾರೆ.
ಸೋಂಕಿತರ ಪೈಕಿ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಮುಂಬೈನಿಂದ ಆಗಮಿಸಿದ 40 ಮತ್ತು 49ರ ಹರೆಯದ ಇಬ್ಬರು ಪುರುಷರು ಹಾಗೂ 34 ವರ್ಷ ಪ್ರಾಯದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಎಲ್ಲರೂ ಸರಕಾರಿ ದಿಗ್ಬಂಧನದಲ್ಲಿದ್ದಾರೆ.
ಸೋಂಕಿತ ಮಗುವಿನ ತಂದೆಗೂ ಕೋವಿಡ್
ಕುಂದಾಪುರ ತಾಲೂಕಿನಲ್ಲಿ ದಿಗ್ಬಂಧನದಲ್ಲಿದ್ದು, ಎರಡು ದಿನಗಳ ಹಿಂದೆ ಕೋವಿಡ್ ದೃಢಪಟ್ಟ ಮಗುವಿನ ತಂದೆಗೂ ಈಗ ಸೋಂಕು ತಗುಲಿದೆ. ಎರಡು ವರ್ಷದ ಪ್ರಾಯ ಮಗು ಪ್ರಸ್ತುತ ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದೆ. ಮಗುವಿನ ತಂದೆ 40ರ ಹರೆಯವ ವ್ಯಕ್ತಿಗೆ ಕೋವಿಡ್ – 19 ಸೋಂಕು ಖಚಿತಪಟ್ಟಿದ್ದು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ.‌ ಸೋಂಕಿತ ಎಲ್ಲರಿಗೂ ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕಕ್ಕೆ ಬಂದವರನ್ನು ಗುರುತಿಸಲಾಗುತ್ತಿದೆ.
ಜಿಲ್ಲಾಡಳಿತದಿಂದ ಗೊಂದಲ
ಉಡುಪಿ ಜಿಲ್ಲಾಧಿಕಾರಿ ಅವರು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯಲ್ಲಿ ಐದು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದರು. ಆದರೆ ರಾಜ್ಯ ಆರೋಗ್ಯ ಇಲಾಖೆಯ ಕೋವಿಡ್ 19 ಪ್ರಕರಣಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮೂರು ಪ್ರಕರಣಗಳನ್ನು ನಮೂದಿಸಲಾಗಿದೆ. ಉಳಿದ ಪ್ರಕರಣಗಳನ್ನು ನಾಳೆ ಖಚಿತಪಡಿಸುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss