Wednesday, July 6, 2022

Latest Posts

ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ತುತ್ತಾದ 614 ಮಂದಿ ಗುಣಮುಖ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ತುತ್ತಾದ 614 ಮಂದಿ ಗುಣಮುಖರಾಗಿ ಒಂದೇ ದಿನ ಆಸ್ಪತ್ರೆ ಹಾಗೂ ಮನೆ ಆರೈಕೆಯಿಂದ ಬಿಡುಗಡೆಯಾಗಿದ್ದಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಹೊಸದಾಗಿ ಸೋಂಕು ಮುಕ್ತರಾದವರಲ್ಲಿ 333 ಜನರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಅಲ್ಲದೇ 281 ಜನರು ಮನೆ ಆರೈಕೆಯಲ್ಲಿಯೇ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ನೋವೆಲ್ ಕೊರೋನಾ ವೈರಸ್ ವ್ಯಾಧಿ ಪೀಡಿತರ ಸಂಖ್ಯೆ 7497ಕ್ಕೆ ತಲುಪಿದೆ. ಇವರಲ್ಲಿ ಈಗಾಗಲೇ ಒಟ್ಟು ಸೋಂಕಿತರಲ್ಲಿ ಈಗಾಗಲೇ 4872 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಜಿಲ್ಲೆಯ ಗುಣಮುಖರಾಗುವ ಪ್ರಮಾಣ ಶೇ.65ಕ್ಕೆ ಏರಿಕೆಯಾಗಿದೆ.
ಮತ್ತೆ 322 ಜನರಿಗೆ ಅಂಟಿದ ವ್ಯಾಧಿ
ಆರೋಗ್ಯ ಇಲಾಖೆಗೆ ಶುಕ್ರವಾರ ಲಭ್ಯವಾದ ವರದಿಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 322 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ, ಉಳಿದ 2262 ಜನರಲ್ಲಿ ಸೋಂಕು ಇಲ್ಲದಿರುವುದು ಖಚಿತವಾಗಿದೆ. ಹೊಸ ಸೋಂಕಿತರಲ್ಲಿ 88 ಜನರಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಉಳಿದ 234 ಮಂದಿಗೆ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಇವರಲ್ಲಿ 175 ಪುರುಷರು ಮತ್ತು 147 ಮಹಿಳೆಯರಿದ್ದಾರೆ. ಉಡುಪಿ ತಾಲೂಕಿನಲ್ಲಿ 186, ಕುಂದಾಪುರದಲ್ಲಿ 95 ಮತ್ತು ಕಾರ್ಕಳ ತಾಲೂಕಿನಲ್ಲಿ 36 ಜನರಿಗೆ ಸೋಂಕು ಅಂಟಿದೆ. ಸೋಂಕಿತರಲ್ಲಿ 132 ಜನರು ಮನೆ ಆರೈಕೆಯಲ್ಲಿದ್ದರೆ, ಉಳಿದವರನ್ನು ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.
ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 2550 ಮಂದಿಯಲ್ಲಿ ಮಾತ್ರ ಸೋಂಕು ಸಕ್ರಿಯವಾಗಿದೆ. ಇವರ ಪೈಕಿ 1301 ಜನರು ಆಸ್ಪತ್ರೆಗಳಲ್ಲಿ ಹಾಗೂ ಉಳಿದ 1249 ಮಂದಿ ಮನೆಯಲ್ಲಿಯೇ ಆರೈಕೆ ಪಡೆಯುತ್ತಿದ್ದಾರೆ. ಶುಕ್ರವಾರ ಮತ್ತೆ ಐವರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 75ಕ್ಕೆ ತಲುಪಿದೆ ಎಂದು ತಿಳಿಸಿರುವ ಡಿಎಚ್‌ಒ, ಮತ್ತೆ ಹೊಸದಾಗಿ 2369 ಜನರ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಪಡೆಯಲಾಗಿದೆ. ಇವರಲ್ಲಿ 1640 ಜನರ ವರದಿ ಬರಲು ಬಾಕಿ ಇದೆ ಎಂದು ವಿವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss