Saturday, July 2, 2022

Latest Posts

ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ 260 ಮಂದಿ ಗುಣಮುಖ, 237 ಜನರಿಗೆ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಕೋವಿಡ್-19 ಸೋಂಕು ತಗುಲಿರುವುದಕ್ಕಿಂತ ಹೆಚ್ಚು ಮಂದಿ ವ್ಯಾಧಿ ಮುಕ್ತರಾಗಿದ್ದಾರೆ. ಸೋಂಕಿಗೆ ತುತ್ತಾದವರು 237 ಜನರಾದರೆ, ಗುಣಮುಖರಾದವರು 260 ಮಂದಿ ಇದ್ದಾರೆ.
ಸೋಂಕು ಮುಕ್ತರಾದವರಲ್ಲಿ 106 ಮಂದಿ ವಿವಿಧ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮನೆ ಆರೈಕೆಯಿಂದ 154 ಜನರು ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಮುಕ್ತರಾದವರ ಸಂಖ್ಯೆ 5361ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಹೊಸ ಸೋಂಕಿತರಲ್ಲಿ ಉಡುಪಿ ತಾಲೂಕಿನ 122, ಕುಂದಾಪುರದ 100 ಮತ್ತು ಕಾರ್ಕಳ ತಾಲೂಕಿನಲ್ಲಿ 14 ಜನರು ಸೇರಿದ್ದಾರೆ. ಇವರಲ್ಲಿ 67 ಜನರಿಗೆ ರೋಗ ಲಕ್ಷಣಗಳಿದ್ದರೆ, ಉಳಿದ 170 ಮಂದಿಯಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಇವರಲ್ಲಿ 124 ಪುರುಷರು ಮತ್ತು 113 ಮಹಿಳೆಯರಿದ್ದಾರೆ. ಸೋಂಕಿತರಲ್ಲಿ 116 ಜನರು ಮನೆ ಆರೈಕೆಯಲ್ಲಿದ್ದರೆ, ಉಳಿದವರನ್ನು ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ತುತ್ತಾದವರ ಸಂಖ್ಯೆ 7738ಕ್ಕೆ ತಲುಪಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 2537 ಸಕ್ರಿಯ ಪ್ರಕರಣಗಳಿವೆ. ಇವರ ಪೈಕಿ 1398 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದರೆ, ಉಳಿದ 1139 ಮಂದಿ ಮನೆ ಆರೈಕೆಯಲ್ಲಿದ್ದಾರೆ. ಒಟ್ಟು 77 ಮಂದಿ ಮೃತಪಟ್ಟಿದ್ದಾರೆ.
ಭಾನುವಾರ ಹೊಸದಾಗಿ 569 ಜನರ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಪಡೆಯಲಾಗಿದೆ. ಇವರದ್ದೂ ಸೇರಿ 1284 ಜನರ ಪರೀಕ್ಷಾ ವರದಿ ಬರಲು ಬಾಕಿ ಇದೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss