ಉಡುಪಿ: ಜಿಲ್ಲೆಯಲ್ಲಿ ನಿನ್ನೆ ಸುರಿದ ಗಾಳಿ ಮಳೆಗೆ ವ್ಯಾಪಕವಾಗಿ ಬೆಳೆ ಹಾನಿ ಸಂಭವಿಸಿದೆ. ಒಂದೇ ದಿನ 2.85 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.
ಬ್ರಹ್ಮಾವರ ತಾಲೂಕೊಂದರಲ್ಲೇ 2.35 ಲಕ್ಷ ರೂ. ನಷ್ಟವಾಗಿದೆ. ಹಿಲಿಯಾಣ ಗ್ರಾಮದ ಪ್ರಮೋದ್ ಶೆಟ್ಟಿ ಅವರ ತೋಟದ ಅಡಕೆ ಮರಗಳು ಗಾಳಿ ಮಳೆಗೆ ನೆಲಕ್ಕುರುಳಿದ್ದು, 1.5 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಅದೇ ಗ್ರಾಮದ ಇನ್ನೂ ಮೂವರ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಅಕ್ಕಮ್ಮ ಪೂಜಾರ್ತಿ ಅವರಿಗೆ 20ಸಾವಿರ ರೂ., ವಿಶ್ವನಾಥ್ ಅವರಿಗೆ 35ಸಾವಿರ ರೂ. ಮತ್ತು ಜಲಜಾಕ್ಷಿ ಶೆಡ್ತಿ ಅವರಿಗೆ 30ಸಾವಿರ ರೂ. ನಷ್ಟ ಉಂಟಾಗಿದೆ.
ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಪ್ರದೀಪ್ ಭಟ್ ಅವರ ಅಡಿಕೆ ತೋಟಕ್ಕೆ ಹಾನಿಯಾಗಿ 50ಸಾವಿರ ರೂ. ನಷ್ಟ ಸಂಭವಿಸಿದೆ.