Sunday, August 14, 2022

Latest Posts

ಉಡುಪಿ ಜಿಲ್ಲೆಯಲ್ಲಿ ಬುಧವಾರ 251 ಮಂದಿಗೆ ಕೊರೋನಾ ದೃಢ, 246 ಮಂದಿ ಸೋಂಕಿನಿಂದ ಮುಕ್ತ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 246 ಮಂದಿ ಕೋವಿಡ್-19 ಸೋಂಕಿನಿಂದ ಮುಕ್ತರಾದರೆ, 251 ಜನರಿಗೆ ವ್ಯಾಧಿ ಅಂಟಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಹೊಸದಾಗಿ ಸೋಂಕಿನಿಂದ ಮುಕ್ತರಾದವರಲ್ಲಿ 99 ಮಂದಿ ಆಸ್ಪತ್ರೆಗಳಲ್ಲಿ ಗುಣಮುಖರಾದರೆ, ಉಳಿದ 147 ಜನರು ಮನೆ ಆರೈಕೆಯಿಂದ ಬಿಡುಗಡೆಯಾಗಿದ್ದಾರೆ. ಇವರೂ ಸೇರಿ ಒಟ್ಟು 7983 ಜನರು ಇಲ್ಲಿಯವರೆಗೆ ವ್ಯಾಧಿಯಿಂದ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯ ಚೇತರಿಕೆ ಪ್ರಮಾಣ ಶೇ. 74.57ರಷ್ಟಿದೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 10,704 ಜನರಿಗೆ ಸಾಂಕ್ರಮಿಕ ಕೋವಿಡ್ ವ್ಯಾಧಿ ದೃಢಪಟ್ಟಿದೆ. ಇವರಲ್ಲಿ 2629 ಮಂದಿಯಲ್ಲಿ ಇನ್ನೂ ಸೋಂಕು ಸಕ್ರಿಯವಾಗಿದೆ. ಅಲ್ಲದೇ 92 ಜನರು ಮೃತಪಟ್ಟಿದ್ದಾರೆ. ಹೊಸದಾಗಿ ಸೋಂಕು ಪತ್ತೆಯಾದವರಲ್ಲಿ 64 ಮಂದಿಗೆ ರೋಗ ಲಕ್ಷಣಗಳಿದ್ದರೆ, 187 ಜನರಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಿಲ್ಲ. ಉಡುಪಿ ತಾಲೂಕಿನಲ್ಲಿ 110, ಕುಂದಾಪುರ ತಾಲೂಕಿನಲ್ಲಿ 81 ಮತ್ತು ಕಾರ್ಕಳ ತಾಲೂಕಿನಲ್ಲಿ 84 ಮಂದಿಗೆ ರೋಗ ತಗುಲಿದೆ.
ಆರೋಗ್ಯ ಇಲಾಖೆಗೆ ಒಟ್ಟು 1288 ವರದಿಗಳು ಲಭಿಸಿವೆ. ಇವರಲ್ಲಿ 1037 ವರದಿಗಳು ನೆಗೆಟಿವ್ ಆಗಿವೆ. ಅಂದರೆ ಪರೀಕ್ಷೆಗೊಳಪಟ್ಟವರಲ್ಲಿ ಶೇ. 19.48 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬುಧವಾರ 1124 ಮಂದಿಯ ಗಂಟಲ ದ್ರವದ ಮಾದರಿ ಪಡೆಯಲಾಗಿದೆ. ಇವರಲ್ಲಿ 731 ಜನರ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss