Tuesday, August 9, 2022

Latest Posts

ಉಡುಪಿ ಜಿಲ್ಲೆಯಲ್ಲಿ ಬುಧವಾರ 263 ಮಂದಿಗೆ ಕೋವಿಡ್-19 ದೃಢ, 198 ಮಂದಿ ಗುಣಮುಖ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 263 ಮಂದಿಗೆ ಕೋವಿಡ್-19 ಸೋಂಕು ಅಂಟಿರುವುದು ದೃಢಪಟ್ಟಿದೆ. ಉಡುಪಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 6773ಕ್ಕೆ ತಲುಪಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಹೊಸ ಸೋಂಕಿತರಲ್ಲಿ 51 ಜನರಲ್ಲಿ ಸೋಂಕಿನ ಲಕ್ಷಣಗಳಿವೆ. ಉಳಿದ 212 ಜನರಲ್ಲಿ ಲಕ್ಷಣಗಳು ಗೋಚರಿಸಿಲ್ಲ. ಇವರಲ್ಲಿ 138 ಜನ ಪುರುಷರಿದ್ದರೆ, 125 ಮಂದಿ ಮಹಿಳೆಯರಿದ್ದಾರೆ. ಉಡುಪಿ ತಾಲೂಕಿನಲ್ಲಿ 142, ಕುಂದಾಪುರ ತಾಲೂಕಿನಲ್ಲಿ 95 ಮತ್ತು ಕಾರ್ಕಳದಲ್ಲಿ 23 ಜನರಿಗೆ ವ್ಯಾಧಿ ತಗುಲಿದೆ. ಸೋಂಕಿತರಲ್ಲಿ 92 ಮಂದಿ ಮನೆ ಆರೈಕೆಯಲ್ಲಿದ್ದಾರೆ. ಉಳಿದ 171 ಮಂದಿ ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 198 ಮಂದಿ ಗುಣಮುಖ
ಉಡುಪಿ ಜಿಲ್ಲೆಯಲ್ಲಿ ಬುಧವಾರ 198 ಮಂದಿ ಆಸ್ಪತ್ರೆ ಮತ್ತು ಮನೆ ಆರೈಕೆಯಲ್ಲಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 3966 ಜನರು ಸೋಂಕು ಮುಕ್ತರಾಗಿದ್ದಾರೆ. ಪ್ರಸಕ್ತ 2738 ಜನರಲ್ಲಿ ವೈರಸ್ ಸಕ್ರಿಯವಾಗಿದೆ. ಇವರಲ್ಲಿ 1290 ಜನರು ಮನೆ ಆರೈಕೆಯಲ್ಲಿದ್ದಾರೆ. ಬುಧವಾರ ಮತ್ತೆ ಮೂವರು ಮೃತಪಟ್ಟು, ಈ ಸಂಖ್ಯೆ 69ಕ್ಕೆ ಏರಿಕೆಯಾಗಿದೆ ಎಂದು ಡಿಎಚ್‌ಒ ವಿವರಿಸಿದ್ದಾರೆ.
ಆರೋಗ್ಯ ಇಲಾಖೆ ಬುಧವಾರ ಲಭಿಸಿದ 1179 ವರದಿಗಳು ನೆಗೆಟಿವ್ ಆಗಿವೆ. ಹೊಸದಾಗಿ 1577 ಜನರ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಪಡೆಯಲಾಗಿದೆ. ಇವರದ್ದೂ ಸೇರಿ 1745 ಮಂದಿಯ ವರದಿ ಬರಬೇಕಿದೆ ಎಂದು ಡಿಎಚ್‌ಒ ಡಾ. ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss