ಉಡುಪಿ: ಜಿಲ್ಲೆಯಲ್ಲಿ ಸಾಂಕ್ರಮಿಕ ಕೋವಿಡ್-19 ಸೋಂಕು ಪೀಡಿತರಾದವರ ಸಂಖ್ಯೆ 4674ಕ್ಕೆ ತಲುಪಿದೆ. ಭಾನುವಾರ
182 ಜನರಲ್ಲಿ ನೋವೆಲ್ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಉಡುಪಿ ತಾಲೂಕಿನಲ್ಲಿ 75, ಕುಂದಾಪುರದಲ್ಲಿ 55 ಮತ್ತು ಕಾರ್ಕಳ ತಾಲೂಕಿನಲ್ಲಿ 51 ಮಂದಿ ಹೊಸ ಸೋಂಕಿತರಿದ್ದಾರೆ.
ಇವರಲ್ಲಿ 107 ಮಂದಿ ಪುರುಷರು ಮತ್ತು 75 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 26 ಮಂದಿ ಮನೆ ಆರೈಕೆಯಲ್ಲಿದ್ದಾರೆ. ಉಳಿದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಶೇ. 57.68ರಷ್ಟು ಚೇತರಿಕೆ ಪ್ರಮಾಣ
ಜಿಲ್ಲೆಯ ಒಟ್ಟು ಸೋಂಕಿತರಲ್ಲಿ 2696 ಮಂದಿ ಗುಣಮುಖರಾಗಿದ್ದು, ಗುಣಮುಖವಾಗುವ ಪ್ರಮಾಣ ಶೇ. 57.68ರಷ್ಟಿದೆ. ಭಾನುವಾರ 50 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 1943 ಮಂದಿಯಲ್ಲಿ ವೈರಸ್ ಸಕ್ರಿಯವಾಗಿದೆ. ಇವರಲ್ಲಿ 779 ಮಂದಿ ಮನೆ ಆರೈಕೆಯಲ್ಲಿದ್ದಾರೆ ಎಂದು ಡಿಎಚ್ಒ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮತ್ತೆ ಒಬ್ಬರು ಮೃತ್ಯು
ಉಡುಪಿ ಜಿಲ್ಲೆಯಲ್ಲಿ ಭಾನುವಾರ ಒಬ್ಬ ಮಹಿಳೆ ಕೊನೆಯುಸಿರೆಳೆದಿದ್ದಾರೆ. ತಾಲೂಕಿನ ಎಲ್ಲೂರು ಗ್ರಾಮದ 54 ವರ್ಷ ಪ್ರಾಯದ ಮಹಿಳೆ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 36 ಮಂದಿ ಕೋವಿಡ್ ಸೋಂಕಿಗೆ ತುತ್ತಾದವರು ಅಸುನೀಗಿದ್ದಾರೆ ಎಂದು ಡಿಎಚ್ಒ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಗೆ ಭಾನುವಾರ ಸಿಕ್ಕಿದ 625 ವರದಿಗಳು ನೆಗೆಟಿವ್ ಆಗಿವೆ. ಹೊಸದಾಗಿ 977 ಜನರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇವರಲ್ಲಿ 616 ಮಂದಿಯ ವರದಿ ಬರಲು ಬಾಕಿ ಇದೆ. ಪ್ರತ್ಯೇಕಿತ ವಾರ್ಡ್ಗಳಲ್ಲಿ 29 ಜನ ಹೊಸ ಶಂಕಿತರು ದಾಖಲಾಗಿದ್ದು, ಒಟ್ಟು 325 ಜನರು ಆಸ್ಪತ್ರೆ ನಿಗಾದಲ್ಲಿದ್ದಾರೆ. ಗೃಹ ದಿಗ್ಬಂಧನದಲ್ಲಿ 1267 ಜನರಿದ್ದಾರೆ ಎಂದು ಡಿಎಚ್ಒ ವಿವರಿಸಿದ್ದಾರೆ.