ಮಂಗಳೂರು: ಉಡುಪಿ ಜಿಲ್ಲೆಯಲ್ಲಿ ಭಾನುವಾರ 118 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ.
ಇವರಲ್ಲಿ ಮಕ್ಕಳು ಸೇರಿದಂತೆ 74 ಮಂದಿ ಪುರುಷರಾಗಿದ್ದು, 44 ಮಂದಿ ಮಹಿಳೆಯರಾಗಿದ್ದಾರೆ. 90 ಮಂದಿಯಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಸೋಂಕು ತಗುಲಿದವರಲ್ಲಿ ಉಡುಪಿ ತಾಲೂಕಿನ 58, ಕುಂದಾಪುರ ತಾಲೂಕಿನ 25 ಹಾಗೂ ಕಾರ್ಕಳ ತಾಲೂಕಿನ 34 ಮಂದಿ ಸೇರಿದ್ದಾರೆ. 118 ಮಂದಿಯಲ್ಲಿ 23 ಮಂದಿಯನ್ನು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, 95 ಮಂದಿ ತಮ್ಮ ತಮ್ಮ ಮನೆಗಳಲ್ಲೇ ಹೋಮ್ ಐಸೋಲೇಷನ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದೇ ಸಂದರ್ಭ ಇಂದು 175 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಭಾನುವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ.