Wednesday, August 10, 2022

Latest Posts

ಉಡುಪಿ ಜಿಲ್ಲೆಯಲ್ಲಿ ಮತ್ತೆ ಚುರುಕುಗೊಂಡ ನೈಋತ್ಯ ಮುಂಗಾರು

ಉಡುಪಿ:ನೈಋತ್ಯ ಮುಂಗಾರು ಮತ್ತೆ ತೀವ್ರಗೊಳ್ಳುತ್ತಿದೆ. ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನವರೆಗೆ ಉತ್ತಮ ಮಳೆ ಸುರಿದಿದ್ದು, ಹಗಲಲ್ಲಿ ಮೋಡದ ವಾತಾವರಣ ಮುಂದುವರಿದಿದೆ. ಸಂಜೆಯ ವೇಳೆಗೆ ಇನ್ನಷ್ಟು ಮಳೆಯ ನಿರೀಕ್ಷೆ ಇದೆ.
ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಆದರೂ ಕುಂದಾಪುರ ತಾಲೂಕಿನಲ್ಲಿ ಅಧಿಕ ಮಳೆಯಾಗಿದೆ.
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 75 ಮಿ.ಮೀ. ಮಳೆಯಾಗಿದೆ. ಕುಂದಾಪುರ ತಾಲೂಕಿನಲ್ಲಿ ಗರಿಷ್ಠ 92 ಮಿ.ಮೀ. ಮಳೆ ಸುರಿದಿದೆ. ಉಡುಪಿ ತಾಲೂಕಿನಲ್ಲಿ 67 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 65 ಮಿ.ಮೀ. ಮಳೆ ಬಿದ್ದಿದೆ.
ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅತಿ ಭಾರೀ ಮಳೆ ಸುರಿದಿದೆ. ಕಿರಿಮಂಜೇಶ್ವರ ಗ್ರಾಮದಲ್ಲಿ ಅತ್ಯಧಿಕ 166 ಮಿ.ಮೀ. ಮಳೆ ದಾಖಲಾಗಿದೆ. ಕಾಲ್ತೋಡು ಗ್ರಾಮದಲ್ಲಿ 163 ಮಿ.ಮೀ., ಖಂಬದಕೋಣೆಯಲ್ಲಿ 158 ಮಿ.ಮೀ., ಆಲೂರು 139 ಮಿ.ಮೀ., ಬಿಜೂರು, ನಾಡ ಗ್ರಾಮದಲ್ಲಿ ತಲಾ 123 ಮಿ.ಮೀ., ಹಕ್ಲಾಡಿ ಗ್ರಾಮದಲ್ಲಿ 121 ಮಿ.ಮೀ., ಹೆಗ್ಗುಂಜೆಯಲ್ಲಿ 120 ಮಿ.ಮೀ. ಮಳೆಯಾಗಿದೆ.
ಅದಲ್ಲದೇ ಜಿಲ್ಲೆಯ ಚಾರ, ಗೋಪಾಡಿ, ಕಟ್‌ಬೆಳ್ತೂರು, ಉದ್ಯಾವರ, ಮಣಿಪುರ, ಕಡೆಕಾರು, ಕುಂಭಾಶಿ, ಬಳ್ಕೂರು, ಮರವಂತೆ, ಹೇರೂರು, ನಾವುಂದ ಮೊದಲಾದ ಗ್ರಾಮಗಳಲ್ಲಿ ಭಾರಿ ಮಳೆ ಸುರಿದಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss