Friday, July 1, 2022

Latest Posts

ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಪಾಲನೆ: ಜನಸಂಖ್ಯೆ, ವಾಹನ ಸಂಚಾರ ವಿರಳ

ಉಡುಪಿ: ಕೊರೋನಾ ವೈರಸ್ ಸೋಂಕು ಹರಡುವು ದನ್ನು ತಡೆಗಟ್ಟುವ ಉದ್ದೇಶದಿಂದ ದೇಶಕ್ಕೆ ದೇಶವೇ ಲಾಕ್‌ಡೌನ್‌ಗೆ ಆದೇಶಿಸಲಾಗಿದೆ. ದಿನಗಳು ಕಳೆಯುತ್ತಿದ್ದಂತೆ ಜನರಲ್ಲಿ ಜಾಗೃತಿಯೂ ಮೂಡುತ್ತಿದೆ. ಪರಿಣಾಮ ನಗರದಲ್ಲಿ ಜನ ಮತ್ತು ವಾಹನ ಸಂಚಾರ ವಿರಳವಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಆತಂಕ, ಲಾಕ್‌ಡೌನ್ ಪರಿಣಾಮ ಎಂದಿಗಿಂತ ಶುಕ್ರವಾರ ಜನಸಂಚಾರ ವಿರಳವಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ, ವಾಹನ ಓಡಾಟ ಕಡಿಮೆ ಇತ್ತು. ಒಳರಸ್ತೆಗಳಲ್ಲಿಯೂ ಜನರು ಇರಲಿಲ್ಲ. ರಸ್ತೆಯಲ್ಲಿ ಕೆಲವರು ಓಡಾಡುತ್ತಿದ್ದವರನ್ನು ಪೊಲೀಸರು ಗದರಿಸಿ ಓಡಿಸಿದರು. ಎಂದಿಗಿಂತ ಬಿಗ್ ಬಝಾರ್, ಸಿಟಿ ಸೆಂಟರ್ ಮಾರ್ಕೆಟ್‌ನಲ್ಲಿ, ನಗರದ ದಿನಸಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಮೆಡಿಕಲ್ ಶಾಪ್‌ಗಳಲ್ಲಿ ಸರದಿ ಸಾಲು ಕಂಡುಬಂತು.

ಬಹುತೇಕ ಮುಚ್ಚಿದ ಅಂಗಡಿ ಮುಂಗಟ್ಟು: ನಗರದಲ್ಲಿ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿಕೊಂ ಡಿವೆ. ತೆರೆದುಕೊಂಡಿದ್ದ ಕೆಲವು ಅಂಗಡಿಗಳು ನಿಗದಿತ ಅವಧಿಯಲ್ಲಿ ಮಾತ್ರ ತೆರೆದುಕೊಳ್ಳುತ್ತಿವೆ. ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಗುರುತು ಮಾಡದೆ,ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯವಹಾರ ಮಾಡು ವುದು ಕಂಡುಬಂದರೆ ಅಂತಹ ಅಂಗಡಿ ಗಳನ್ನು ಮುಚ್ಚುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆ, ಕ್ಲಿನಿಕ್ ತೆರೆಯಲು ಸೂಚನೆ: ಜಿಲ್ಲೆಯಲ್ಲಿ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ ಮುಖ್ಯಸ್ಥರು ಮತ್ತು ಡಾಕ್ಟರ್‌ಗಳಿಗೆ ಕ್ಲಿನಿಕ್ ಹಾಗೂ ನರ್ಸಿಂಗ್ ಹೋಮ್‌ಗಳನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ  ಸೂಚನೆ ನೀಡಿದ್ದಾರೆ. ಸಾರ್ವಜನಿಕರಿಗೆ ಆರೋಗ್ಯ ಸೇವೆ ಅಗತ್ಯವಿದೆ. ಉಳಿದ ಸಮಯದಲ್ಲಿ ಸೇವೆ ಸಲ್ಲಿಸಿ ತುರ್ತು ಸಂದರ್ಭ ಬಾಗಿಲು ಮುಚ್ಚಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಎಲ್ಲ ಖಾಸಗಿ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳನ್ನು ತೆರೆಯು ವಂತೆ, ತಪ್ಪಿದಲ್ಲಿ (ಕೆಪಿಎಂಎ ಆಕ್ಟ್) ಕಾನೂನು ಪ್ರಕಾರ ಜಿಲ್ಲಾಡಳಿತ ಕ್ರಮ ಜರಗಿಸಲಿದೆ. ಇಲ್ಲದಿದ್ದಲ್ಲಿ ಲೈಸೆನ್ಸ್‌ನ್ನು ತತ್‌ಕ್ಷಣ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ನಿರ್ಗತಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ: ಇಡೀ ಊರಿಗೆ ಊರೇ ಸ್ತಬ್ಧವಾಗಿ ರುವುದರಿಂದ ನಗರದಲ್ಲಿ ಸಾಕಷ್ಟು ಮಂದಿ ನಿರ್ಗತಿಕರು, ಕೂಲಿ ಕಾರ್ಮಿ ಕರು ಊಟವಿಲ್ಲದೇ ಹಸಿದುಕೊಂಡು ಕಂಡುಬರುತ್ತಿದ್ದಾರೆ. ಅದಕ್ಕಾಗಿ ಸಂಘ, ಸಂಸ್ಥೆ, ಸಾಮಾಜಿಕ ಕಾರ್ಯಕತರಿಂದ ನಿರ್ಗತಿಕರಿಗೆ, ಕೂಲಿಕಾರ್ಮಿಕರಿಗೆ, ಬಡವರಿಗೆ ಉಚಿತ ಊಟ ನೀಡಲಾಯಿತು. ಉಡುಪಿ ನಗರ, ಬೀಡಿನಗುಡ್ಡೆ, ಉದ್ಯಾವರ, ಕಟಪಾಡಿ, ಸಂತೆಕಟ್ಟೆ, ಮಣಿಪಾಲ, ಇಂದ್ರಾಳಿ ಆಸುಪಾಸಿನ ಪ್ರದೇಶದಲ್ಲಿ ತಂಡ, ತಂಡವಾಗಿ ಕಾರ್ಯ ನಿರ್ವಹಿಸಿ ಊಟ ಹಂಚಲಾ ಯಿತು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ವತಿಯಿಂದ ಆಸರೆ ಚಾರಿಟೇಬಲ್ ಟ್ರಸ್ಟ್ ಸಹಕಾರದಲ್ಲಿ ೮೦೦ ಮಂದಿಗೆ, ಬಾಳಿಗ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ ಭಂಡಾರಿ ನೇತೃತ್ವದ ಹೆಲ್ಪಿಂಗ್ ಹ್ಯಾಂಡ್ಸ್ ತಂಡ ೨೦೦ ಮಂದಿಗೆ ಊಟ ನೀಡಿದೆ. ಅಲ್ಲದೆ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ಅನ್ಸರ್ ಅಹಮ್ಮದ್ ಅವರು ರಸ್ತೆ ಬದಿ ಇದ್ದ ನಿರ್ಗತಿಕರಿಗೆ ಊಟದ ಪಾರ್ಸೆಲ್ ಹಂಚಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss