Friday, July 1, 2022

Latest Posts

ಉಡುಪಿ ಜಿಲ್ಲೆಯಲ್ಲಿ ಶನಿವಾರ 238 ಮಂದಿ ಗುಣಮುಖ, 169 ಮಂದಿಗೆ ಕೋವಿಡ್ ಪಾಸಿಟಿವ್ ದೃಢ

ಉಡುಪಿ: ಜಿಲ್ಲೆಯಲ್ಲಿ ಶನಿವಾರ 238 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 12,022 ಜನರು ಸೋಂಕು ಮುಕ್ತರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಒಟ್ಟು 13,912 ಮಂದಿಗೆ ಈವರೆಗೆ ಕೋವಿಡ್-19 ಸೋಂಕು ಅಂಟಿದೆ. ಇವರಲ್ಲಿ ಶೇ. 86.41ರಷ್ಟು ಜನರು ಚೇತರಿಸಿಕೊಂಡಿದ್ದಾರೆ. ಇವರಲ್ಲಿ 6490 ಜನರು ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆದರೆ, ಉಳಿದ 5532 ಜನರು ಮನೆ ಆರೈಕೆಯಿಂದಲೇ ಚೇತರಿಸಿಕೊಂಡಿದ್ದಾರೆ. ಪ್ರಸಕ್ತ ಸೋಂಕಿತರಲ್ಲಿ ಹೆಚ್ಚಿನವರು ಮನೆಗಳಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಆರೈಕೆ ಪಡೆಯುತ್ತಿದ್ದಾರೆ. ಸದ್ಯ 1760 ಸಕ್ರಿಯ ಪ್ರಕರಣಗಳಿವೆ.
ಶನಿವಾರ ಆರೋಗ್ಯ ಇಲಾಖೆಗೆ ಲಭಿಸಿದ 169 ವರದಿಗಳು ಕೋವಿಡ್ ಪಾಸಿಟಿವ್ ಆದರೆ, 915 ವರದಿಗಳು ಕೋವಿಡ್ ನೆಗೆಟಿವ್ ಆಗಿವೆ. ಹೊಸ ಸೋಂಕಿತರಲ್ಲಿ 76 ಮಂದಿಯಲ್ಲಿ ರೋಗ ಲಕ್ಷಣಗಳಿದ್ದರೆ, 93 ಜನರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನಲ್ಲಿ 95, ಕುಂದಾಪುರ ತಾಲೂಕಿನಲ್ಲಿ 47 ಮತ್ತು ಕಾರ್ಕಳ ತಾಲೂಕಿನಲ್ಲಿ 22 ಮಂದಿಗೆ ವ್ಯಾಧಿ ಅಂಟಿದೆ. ಹೊರ ಜಿಲ್ಲೆಯ ಐದು ಜನರು ಸೋಂಕಿತರಾಗಿದ್ದಾರೆ.
ಶನಿವಾರ ಮತ್ತೆ ಇಬ್ಬರು ಕೊನೆಯುಸಿರೆಳೆದು ಸಾವಿನ ಸಂಖ್ಯೆ 130ಕ್ಕೆ ತಲುಪಿದೆ.
ಮತ್ತೆ ಹೊಸದಾಗಿ 1125 ಮಂದಿಯ ಗಂಟಲ ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಪಡೆಯಲಾಗಿದೆ. ಇವರಲ್ಲಿ 451 ಜನರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ. ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss